By using this site, you agree to the Privacy Policy and Terms of Use.
Accept
anukshana.inanukshana.inanukshana.in
Notification Show More
Font ResizerAa
  • News
    • Karnataka
    • National
    • World
  • Bengaluru
  • Cinema
  • Budget 2026
  • Politics
  • Crime
  • epaper
  • Contact Us
Reading: ರಾಜ್ಯದಲ್ಲಿ ತಮಿಳುನಾಡು ಮಾದರಿ ಶಿಕ್ಷಕರ ನೇಮಕ ವ್ಯವಸ್ಥೆ ಬರಲಿ:ಬಸವರಾಜ ಬೊಮ್ಮಾಯಿ
Share
Font ResizerAa
anukshana.inanukshana.in
Search
  • Home
  • Bengaluru
    • GBA
    • BDA
    • Bengaluru City Police
    • Bengaluru Traffic Police
    • #SwachhSurvekshan2026
    • Census 2026
  • News
    • Karnataka
    • National
    • World
  • Districts
  • Cinema
  • Crime
  • Health
  • Politics
  • Sitemap
  • epaper
  • Contact Us
Have an existing account? Sign In
Follow US

ರಾಜ್ಯದಲ್ಲಿ ತಮಿಳುನಾಡು ಮಾದರಿ ಶಿಕ್ಷಕರ ನೇಮಕ ವ್ಯವಸ್ಥೆ ಬರಲಿ:ಬಸವರಾಜ ಬೊಮ್ಮಾಯಿ

Anukshana Media
Last updated: February 23, 2026 10:48 am
Anukshana Media
Published: February 23, 2026

ಹಾವೇರಿ: ಒಬ್ಬ ಶಿಕ್ಷಕರು ನಿವೃತ್ತರಾಗುವ ಮುಂಚಿನ ವರ್ಷ ಇನ್ನೊಬ್ಬ ಶಿಕ್ಷಕರ ನೇಮಕ ಮಾಡುವ ತಮಿಳು ನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಶಿಕ್ಷಕರ ನೇಮಕಾತಿ ವ್ಯವಸ್ಥೆ ಜಾರಿಗೆ ಬಂದರೆ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ತಪ್ಪಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆಯ 21 ನೇಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸರಸ್ವತಿ ಪೂಜೆ ಹಾಗೂ 7 ನೇಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಇಡೀ ವರ್ಷ ವಿದ್ಯಾರ್ಜನೆ ಮಾಡಿ ಪಾಠ ಕಲಿತು ಆಟ ಆಡಿ ಈಗ ಸ್ನೇಹಿತರಾಗಿ ಒಬ್ಬರಿಗೊಬ್ಬರು ಬೆರೆತು ನಿಮ್ಮ ಕಲೆ ಸಂಸ್ಕೃತಿ ಹಾಗೂ ವಿದ್ಯೆಯ ಪ್ರತಿಭೆಯನ್ನು ತೋರಿಸಲು ತಾವೆಲ್ಲ ಸೇರಿದ್ದೀರಿ, ಮಕ್ಕಳ ಪ್ರತಿಭೆ ನೋಡಲು ಪಾಲಕರು ಸೇರಿದ್ದೀರಿ. ಇದು ನಿಜವಾದ ಸಂಗಮ ಮಕ್ಕಳನ್ನು ದೇವರೆಂದು ಕರೆಯುತ್ತಾರೆ. ಅವರ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತೇವೆ. ತಾಯಿ ಮೊದಲ ಗುರು, ಆ ಮೇಲೆ ಶಾಲೆಯಲ್ಲಿ ಕಲಿಸುವ ಗುರುಗಳು ಶಿಕ್ಷಣ ನೀಡುತ್ತಾರೆ. ತಾಯಿ ಸಂಸ್ಕಾರ ಕೊಡುತ್ತಾಳೆ, ಗುರು ಶಿಕ್ಷಣ ನೀಡುತ್ತಾರೆ. ಸಮಾಜ ಬದುಕು ಕೊಡುತ್ತದೆ. ಇದೆಲ್ಲವನ್ನು ನಾವು ಕಲಿಯಬೇಕು ಎಂದು ಹೇಳಿದರು.

ಪಾಠ ಪರೀಕ್ಷೆ ನಿರಂತರ
ಒಮ್ಮೆ ವಿದ್ಯಾರ್ಥಿಯಾದರೆ ಜೀವನದ ಕೊನೆವರೆಗೂ ವಿದ್ಯಾರ್ಥಿಗಳು, ಶಾಲೆಯಲ್ಲಿ ಪಾಠ ಮಾಡಿ ನಂತರ ಪರೀಕ್ಷೆ ಆದರೆ, ಜೀವನದಲ್ಲಿ ಮೊದಲು ಪರೀಕ್ಷೆ ಆ ಮೇಲೆ ಪಾಠ ಹೀಗಾಗಿ ಪಾಠ ಪರೀಕ್ಷೆ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಮಕ್ಕಳು ಜ್ಞಾನದ ಆಯಾಮಗಳನ್ನು ತೆರೆದಿಡಬೇಕು. ಕಣ್ಣು, ಮನಸ್ಸು, ಬುದ್ದಿ ಶಕ್ತಿ, ಶ್ರಾವಣ ಶಕ್ತಿಯನ್ನು ತೆರೆದಿಡಬೇಕು. ಆಗ ಎಲ್ಲ ದೃಷ್ಟಿಯಿಂದ ಜ್ಞಾನ ಪಡೆಯಲು ಸಾಧ್ಯ ಯಾರು ಜ್ಞಾನವಂತರಾಗುತ್ತಾರೆ ಅವರು ಬದುಕಿಯಲ್ಲಿ ಯಶಸ್ವಿಯಾಗುತ್ತಾರೆ. ಗುರುಗಳು ಪಾಠ ಮಾಡಿದರೆ ಯಾಕೆ, ಏನು, ಎಲ್ಲಿ, ಎಷ್ಟು ಎನ್ನುವ ಪ್ರಶ್ನೆಗಳನ್ನು ಕೇಳಬೇಕು, ಪ್ರಶ್ನೆಗಳನ್ನು ಕೇಳಿದರೆ ಬುದ್ದಿ ಶಕ್ತಿ ಬೆಳೆಯುತ್ತದೆ. ತರ್ಕ. ಬದ್ಧವಾದ ಚಿಂತನೆ ಬರುತ್ತದೆ. ಶಾಲೆಯಲ್ಲಿ ಪರೀಕ್ಷೆ ಕೊಟ್ಟಾಗ ಅದು ಮಕ್ಕಳ ಪರೀಕ್ಷೆಯಲ್ಲ ಅದು ಗುರುಗಳು ಹೇಗೆ ಕಲಿಸಿದ್ದಾರೆ ಎನ್ನುವ ಪರೀಕ್ಷೆ. ಹೀಗಾಗಿ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳ ಹೃದಯ ಮಟ್ಟುವ ಹಾಗೆ ಕಲಿಸಬೇಕು. ಪ್ರಶ್ನೆ ಕೇಳುವ ಹಕ್ಕು ಮಕ್ಕಳಿಗಿದೆ. ಆದರೆ, ನಮ್ಮ ದೇಶದಲ್ಲಿ ತದ್ದಿರುದ್ಧವಿದೆ. ಮಕ್ಕಳು ಪ್ರಶ್ನೆ. ಕೇಳುವ ಬದಲು ಶಿಕ್ಷಕರು ಪ್ರಶ್ನೆ ಕೇಳುತ್ತಾರೆ. ಮಕ್ಕಳು ಪ್ರಶ್ನೆ ಕೇಳಿದರೆ ಶಾಂತವಾಗಿ ಉತ್ತರ ಕೊಡಬೇಕು. ಗಾಮಾಂತರ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳ ಶಿಕ್ಷಣದಲ್ಲಿ ಏರುಪೇರಿದೆ ಇದು ನಮ್ಮ ರಾಜ್ಯ ದೇಶದಲ್ಲಿರುವ ಸವಾಲು, ಐದನೇ ತರಗತಿವರೆಗೂ ಕನ್ನಡ ನಂತರ ಇಂಗ್ಲಿಷ್ ಕಲಿಯಬೇಕು, ಪಿಯುಸಿ ನಂತರ ಎಂಜನೀಯರಿಂಗ್, ಮೆಡಿಕಲ್ ಹೋಗಲು ಇಂಗ್ಲಿಷ್ ಕಲಿಯಬೇಕು. ಇಂಗ್ಲಿಷ್ ಕಲಿತ ಮಕ್ಕಳೊಂದಿಗೆ ಗ್ರಾಮೀಣ ಮಕ್ಕಳು ಪೈಪೋಟಿ ಮಾಡಲು ಹೇಗೆ ಸಾಧ್ಯ ನಮ್ಮ ರಾಜ್ಯದ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಹೀಗಾಗಿ ಎಲ್ಲ ಕಡೆಯೂ ಕೆಪಿಎಸ್ ಶಾಲೆಗಳು ಬೇಕು ಅನ್ನುವ ಬೇಡಿಕೆ ಇದೆ ಎಂದರು.

ನಮ್ಮ ರಾಜ್ಯದಲ್ಲಿ ಶೇ 65 ರಷ್ಟು ಶಾಲೆಗಳು ಹಳೆ ಮೈಸೂರು ಭಾಗದಲ್ಲಿವೆ. ಶೇ 35 ರಷ್ಟು ಶಾಲೆಗಳು ಉತ್ತರ ಕರ್ನಾಟಕದಲ್ಲಿವೆ. ಸುದೈವವೆಂದರೆ ನಮ್ಮ ಮಠಗಳು, ಶಿಕ್ಷಣ ಸಂಸ್ಥೆಗಳು ಶಿಕ್ಷಣ ಜ್ಞಾನ ನೀಡುತ್ತಿವೆ. ಅನ್ನ ದಾಸೋಹ, ಅಕ್ಷರ ದಾಸೋಹ ಅರಿವಿನ ದಾಸೋಹವನ್ನು ಮಠಗಳು ಮಾಡುತ್ತಿವೆ. ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಬೇಕು. ಅಲ್ಲಿ ಮಕ್ಕಳು ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಶೀಕ್ಷಕರು ಇರುವಂತೆ ನೋಡಿಕೊಳ್ಳಬೇಕು. ನಾನು ಸಿಎಂ ಆಗಿದ್ದಾಗ 30 ಸಾವಿರ ಶಾಲಾ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನ ಮಾಡಿದ್ದೇವು. ಮೊದಲ ವರ್ಷ 9 ಸಾವಿರ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಅದರಿಂದ ಬರುವಂತಹ ದಿನಗಳಲ್ಲಿ ಮಕ್ಕಳು ಮಳೆ ಬಿಸಿಲಿನಲ್ಲಿ ಪಾಠ ಕಲಿಯುವುದು ತಪ್ಪುತ್ತದೆ. ನಾವು 15 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಮಾಡಿದೇವು. ಅದು ಮುಂದುವರೆಯಬೇಕು. ತಮಿಳು ನಾಡಿನಲ್ಲಿ ಒಬ್ಬ ಶಿಕ್ಷಕರು ನಿವೃತ್ತರಾಗುತ್ತಾರೆ ಎಂದರೆ ಅದಕ್ಕೂ ಮೊದಲಿನ ವರ್ಷವೇ ಶಿಕ್ಷಕರ ನೇಮಕ ಮಾಡಿ ಒಂದು ವರ್ಷ ತರಬೇತಿ ನೀಡುತ್ತಾರೆ. ಆ ವ್ಯವಸ್ಥೆ ಇಲ್ಲಿ ಬರಬೇಕು. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಬೇಡಿಕೆ ನೀಗಿಸುವ ಕೆಲಸ ಮಾಡಿದಾಗ ನಮ್ಮ ಕನ್ನಡದ ಮಕ್ಕಳ ವಿಶ್ವದ ಯಾವುದೇ ಭಾಗದಲ್ಲಿ ಹೋದರೂ ಯಶಸ್ವಿಯಾಗುತ್ತಾರೆ. ನಮ್ಮ ಕಾಟೇನಹಳ್ಳಿಯ ಶಾಲೆಯಲ್ಲಿ ಇಲ್ಲಿನ ಮಕ್ಕಳು ವಿಶ್ವ ವ್ಯಾಪಿ ಆಗಲಿ. ಶಾಲೆ ಸರಸ್ವತಿ ವಾಹನ, ಕೈಲಾಸ ಮಾನಸ ಸರೋವರದಲ್ಲಿ ಪರಮ ಹಂಸ ಪಕ್ಷಿ ಮಾತ್ರ ಇರುತ್ತದೆ. ಅದು ಪರಿಶುದ್ಧವಾಗಿರುತ್ತದೆ. ಈ ಶಾಲೆಯ ಕೀರ್ತಿ ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು, ಶ್ರೀ ಹುಕ್ಕೇರಿಮಠ ಹಾವೇರಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಅರಬಗೊಂಡ, ಮುಖಂಡರುಗಳಾದ ನಾಗೇಂದ್ರ ಕಟಕೋಳ, ದರ್ಶನ ಲಮಾಣಿ, ವೆಂಕಟೇಶ ನಾರಾಯಣಿ, ಎಂ.ಎಸ್.ಪಾಟೀಲ್, ಡಾ. ರಾಮ್ ಮೋಹನ ರಾವ್, ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಏರ್ಪೋರ್ಟ್.ಫಾಸ್ಟ್ ಟ್ಯಾಗ್ ಇಲ್ಲ ಅಂತ KSRTC ತಡೆದ ಟೋಲ್ ಸಿಬ್ಬಂದಿ
ಬೆಂಗಳೂರು ಉತ್ತರ ನಗರ ಪಾಲಿಕೆ ಸಾರ್ವಜನಿಕರೊಂದಿಗೆ ನೇರ ಸಂವಾದ-ಪರಿಣಾಮಕಾರಿ ಆಡಳಿತದತ್ತ ಮತ್ತೊಂದು ಹೆಜ್ಜೆ
ಚಿಕ್ಕೋಡಿ ಬ್ರೇಕಿಂಗ್ಸ್ಮಾರ್ಟ್ ಬಜಾರ್ ನಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನ ಎಚ್ಚರ್. .
ಅಪ್ರಾಪ್ತರ ನಡುವೆ ಗಲಾಟೆ ಹಿಂದೂ ಯುವಕ ಸಾವು ಪ್ರಕರಣ
ಶಿವಾಜಿ ಜಯಂತಿ ವೇಳೆ ಕಲ್ಲೆಸೆದವರ ಮೇಲೆಕ್ರಮಕ್ಕೆ ಬಿ.ವೈ.ವಿಜಯೇಂದ್ರ ಆಗ್ರಹಬೆಂಗಳೂರು
Share This Article
Facebook
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Crime

ವಿಶಾಖ ಉಕ್ಕು ಕಾರ್ಖಾನೆ ದುರಂತ: ಕಾರ್ಮಿಕರ ಸಾವಿನ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ

Anukshana Media
Anukshana Media
June 9, 2026
ಇದು ಪ್ರಕಟಣೆಗೆ ಸೂಕ್ತವಾಗುವಂತೆ ಮರುರಚಿಸಲಾದ ಸುದ್ದಿ:
ಮತದಾರರ ಪಟ್ಟಿ ಪರಿಷ್ಕರಣೆಗೆ ಜೂನ್ 30ರಿಂದ ಮನೆ-ಮನೆ ಸಮೀಕ್ಷೆ
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಸಂತೋಷ್ ಲಾಡ್‌ಗೆ ಡಿಸಿಎಂ, ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಸಕಲ ಮರಾಠ ಸಮಾಜ ಆಗ್ರಹ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Bengaluru

About US

Anukshana Kannada News is a Bengaluru-based digital news platform covering metro city updates with speed and accuracy. We proudly reach over 1 million readers, keeping the city informed every day.

Subscribe US

Subscribe to our newsletter to get our newest articles instantly!

© Foxiz News Network. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?