By using this site, you agree to the Privacy Policy and Terms of Use.
Accept
anukshana.inanukshana.inanukshana.in
Notification Show More
Font ResizerAa
  • News
    • Karnataka
    • National
    • World
  • Bengaluru
  • Cinema
  • Budget 2026
  • Politics
  • Crime
  • epaper
  • Contact Us
Reading: ಕಲಬುರಗಿ ಅಭಿವೃದ್ಧಿಗೆ 2 ಸಾವಿರ ಕೋಟಿ, ಬಡವರಿಗೆ 2 ಸಾವಿರ ಮನೆ ಹಂಚಿಕೆ: ಡಿ.ಕೆ. ಶಿವಕುಮಾರ್
Share
Font ResizerAa
anukshana.inanukshana.in
Search
  • Home
  • Bengaluru
    • GBA
    • BDA
    • Bengaluru City Police
    • Bengaluru Traffic Police
    • #SwachhSurvekshan2026
    • Census 2026
  • News
    • Karnataka
    • National
    • World
  • Districts
  • Cinema
  • Crime
  • Health
  • Politics
  • Sitemap
  • epaper
  • Contact Us
Have an existing account? Sign In
Follow US

ಕಲಬುರಗಿ ಅಭಿವೃದ್ಧಿಗೆ 2 ಸಾವಿರ ಕೋಟಿ, ಬಡವರಿಗೆ 2 ಸಾವಿರ ಮನೆ ಹಂಚಿಕೆ: ಡಿ.ಕೆ. ಶಿವಕುಮಾರ್

Anukshana Media
Last updated: March 8, 2026 11:44 pm
Anukshana Media
Published: March 8, 2026

ಕಲಬುರಗಿ: “ಕಳೆದ ಎರಡು ವರ್ಷಗಳಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಕಲಬುರಗಿ ಜಿಲ್ಲೆಗೆ ನೀಡಲಾಗಿದೆ. ಸುಮಾರು 2000 ಮನೆಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಂಚಿಕೆ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ ಅವರು ಹೇಳಿದರು.

ಕಲಬುರ್ಗಿಯಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“365 ಕೋಟಿ ರೂ.ವೆಚ್ಚದಲ್ಲಿ ಬೆಣ್ಣೆತೊರ ಜಲಾಶಯಕ್ಕೆ ಕಾಗಿಣಾ ಮತ್ತು ಭೀಮಾ ನದಿ ಸಂಗಮದಿಂದ ನೀರು ತುಂಬಿಸಲಾಗುತ್ತಿದೆ. ಐದು ಗ್ಯಾರಂಟಿಗಳ ಜೊತೆಗೆ ಭೂ ಗ್ಯಾರಂಟಿ ನೀಡಿ ಬಡವರ ಮನೆ ಬೆಳಕಾಗಿದ್ದೇವೆ. 400 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೇವೆ ಆ ಮೂಲಕ ನೀರಾವರಿ ಗ್ಯಾರಂಟಿ ನೀಡುತ್ತಿದ್ದೇವೆ” ಎಂದರು.

“ಶಿಕ್ಷಣ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 2000 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲು ತೀರ್ಮಾನ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 330 ಶಾಲೆಗಳನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ 2.50 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು. ಸಧ್ಯ 56,000 ಕ್ಕೂ ಅಧಿಕ ಖಾಲಿ ಹುದ್ದೆ ತುಂಬಲು ಈಗಾಗಲೇ ಕ್ರಮವಹಿಸಲಾಗಿದೆ” ಎಂದರು.

“ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರಿಗೆ ನೆಮ್ಮದಿ ಜೀವನ ನಡೆಸಲು ಸರ್ಕಾರ ಪ್ರತಿ ವರ್ಷ 52,000 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡುತ್ತಿದೆ. ಇದು ನಮ್ಮ ಬದ್ಧತೆ” ಎಂದರು.

“ಸಾಧನೆ ತನ್ನ ಪಾಡಿಗೆ ಆಗುವುದಿಲ್ಲ. ಅದರ ಹಿಂದೆ ಶ್ರಮ ಇರಬೇಕು, ಛಲ ಇರಬೇಕು. ಜನರ ಬದುಕನ್ನು ಬದಲಾವಣೆ ಮಾಡುತ್ತೇನೆ ಎನ್ನುವ ಹಠ ಇರಬೇಕು. ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಋಣವನ್ನ ಕಲ್ಯಾಣ ಕರ್ನಾಟಕದ ಜನತೆ ತೀರಿಸಿದ್ದಾರೆ. 371 ಜೆ ಮೂಲಕ ಈ ಭಾಗದ ಜನರ ಬದುಕನ್ನು ಬದಲಾವಣೆ ಮಾಡಿದ್ದಾರೆ. ಈ ಭಾಗದಲ್ಲಿ ಸಂಸತ್ ಸದಸ್ಯರನ್ನು ಗೆಲ್ಲಿಸುವ ಮೂಲಕ ಅವರಿಗೆ ಋಣ ಸಂದಾಯ ಮಾಡಿದ್ದೀರಿ” ಎಂದರು.

ಪ್ರಿಯಾಂಕ್ ಖರ್ಗೆ ಭವಿಷ್ಯದ ನಾಯಕ
“ನಮ್ಮ ರಾಜ್ಯಕ್ಕೆ ಭವಿಷ್ಯದ ನಾಯಕರಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಈ ಕಲಬುರ್ಗಿ ಜನತೆ ನೀಡಿದ್ದಾರೆ. ಅವರಿಗೆ ನಮ್ಮೆಲ್ಲರ ಪರವಾಗಿ ಕೋಟಿ, ಕೋಟಿ ನಮಸ್ಕಾರಗಳು” ಎಂದರು

“ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಮಾರ್ಗದರ್ಶನದಲ್ಲಿ‌ ಪ್ರಿಯಾಂಕ್ ಖರ್ಗೆ ಉತ್ತಮ‌ ಕೆಲಸ ಮಾಡುತ್ತಿದ್ದಾರೆ. ಯಾವುದೇ ಇಲಾಖೆಯ ಜವಾಬ್ದಾರಿ ನೀಡಿದರು ಅಷ್ಟೇ ದಕ್ಷತೆಯಿಂದ ಕೆಲಸ ಮಾಡುತ್ತಾರೆ. ಪಕ್ಷ, ರಾಜ್ಯದ ಅಭಿವೃದ್ಧಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಸರ್ವ ಸಮುದಾಯಗಳ ಏಳಿಗೆಗೆ ದುಡಿಯುತ್ತಿದ್ದಾರೆ” ಎಂದರು.

“ಅವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕನಕಪುರದ ಜನತೆ ನನಗೆ ಆಶೀರ್ವಾದ ಮಾಡಿದಂತೆ ನೀವು ಕೂಡಾ ಪ್ರಿಯಾಂಕ್ ಖರ್ಗೆ, ರಾಧಾಕೃಷ್ಣ ದೊಡ್ಡಮನಿ ಅವರಿಗೆ ಆಶೀರ್ವಾದ ಮಾಡಬೇಕು ಹಾಗೂ ಅವರ ಕುಟುಂಬದ ಜೊತೆಗೆ ಸದಾ ಇರಬೇಕು” ಎಂದು ಮನವಿ ಮಾಡಿದರು.

“ಮಲ್ಲಿಕಾರ್ಜುನ ಖರ್ಗೆ ಅವರು ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ನೂರಾರು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಕೆರೆಗಳನ್ನು ತುಂಬಿಸಿದವರು. ಅನೇಕ ಕಡೆ ಅಂತರ್ಜಲ ಸಾವಿರಾರು ಅಡಿ ತಲುಪಿತ್ತು. ಈಗ 300- 400 ಅಡಿಗಳಿಗೆ ನೀರು ದೊರೆಯುತ್ತಿದೆ” ಎಂದು ತಿಳಿಸಿದರು.

“ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಕೊಡುಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶತಮಾನಗಳ ಕಾಲ ಚಿರಸ್ಥಾಯಿಯಾಗಿ ಉಳಿಯಲಿದೆ‌. ಮರಕ್ಕೆ ಬೇರು ಮುಖ್ಯ ಅದೇ ರೀತಿ ಈ ಭಾಗದ ಜನರಿಗೆ ಖರ್ಗೆ ಅವರ ಮೇಲೆ ನಂಬಿಕೆ. ಕಲ್ಯಾಣ ಕರ್ನಾಟಕದ ಜನರ ಬದುಕಿಗೆ ಅವರು ಕೊಟ್ಟಂತ ಕೆಲಸಗಳು ಇಡೀ ದೇಶದ ಜನರಿಗೆ ಗೊತ್ತು” ಎಂದರು.

“ಕೃಷ್ಣಾ ಮೇಲ್ದಂಡೆ ಯೋಜನೆ 3 ರ ಅನುಷ್ಠಾನಕ್ಕೆ ಭೂಸ್ವಾಧೀನ ನಡೆಸಲು ಮುಂದಾಗಿದ್ದೇವೆ. ಒಂದು ಎಕರೆಗೆ 35- 40 ಲಕ್ಷ ರೂ. ಪರಿಹಾರ ನಿಗದಿ ಮಾಡಲಾಗಿದೆ. ನಮ್ಮ ನೀರು ನಮ್ಮ ಹಕ್ಕು. ಆಂಧ್ರ ಹಾಗೂ ಮಹಾರಾಷ್ಟ್ರದವರು ಯೋಜನೆ ಅನುಷ್ಠಾನಕ್ಕೆ ಅಡ್ಡಗಾಲು ಹಾಕಿದ್ದಾರೆ” ಎಂದು ಹೇಳಿದರು.

“ಈ ರಾಜ್ಯದ ರೈತರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಜನಸಾಮಾನ್ಯರ ಪರವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಅವರ ಜೀವನಕ್ಕೆ ನೆರವಾಗಿದೆ. ಐದು ಗ್ಯಾರಂಟಿ ಯೋಜನೆಗಳು ಬದುಕನ್ನು ಹಸನಾಗಿಸಿದೆ. 20 ಸಾವಿರ ಕೋಟಿಯನ್ನ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ಬಳಸುತ್ತಿದ್ದೇವೆ” ಎಂದರು.

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ; ಬಾಯಿ ಬಿಡದ ಬಿಜೆಪಿ ನಾಯಕರು
“ಬಿಜೆಪಿ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನ 60 ರೂಪಾಯಿ ಏರಿಕೆ ಮಾಡಿದೆ. ಇದರ ಬಗ್ಗೆ ಒಬ್ಬನೇ ಒಬ್ಬ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ” ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನ ಹುಂಡಿ ಕಾಣಿಕೆ ಎಣಿಕೆ: 39.49,549 ರೂ. ಕಾಣಿಕೆ ಸಂಗ್ರಹ
ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು
ಕೆಆರ್‌ಎಸ್ ನೀರಿನ ಹಂಚಿಕೆ ವಿವಾದ: ರೈತರಿಗೆ ಭೀಕರ ಸಂಕಷ್ಟದ ಎಚ್ಚರಿಕೆ
ಹುಬ್ಬಳ್ಳಿ-ಧಾರವಾಡ ವಿಭಜನೆಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್: ಡಾ. ವೀರಣ್ಣ ಮತ್ತಿಕಟ್ಟಿ
Share This Article
Facebook
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Crime

ವಿಶಾಖ ಉಕ್ಕು ಕಾರ್ಖಾನೆ ದುರಂತ: ಕಾರ್ಮಿಕರ ಸಾವಿನ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ

Anukshana Media
Anukshana Media
June 9, 2026
ಇದು ಪ್ರಕಟಣೆಗೆ ಸೂಕ್ತವಾಗುವಂತೆ ಮರುರಚಿಸಲಾದ ಸುದ್ದಿ:
ಮತದಾರರ ಪಟ್ಟಿ ಪರಿಷ್ಕರಣೆಗೆ ಜೂನ್ 30ರಿಂದ ಮನೆ-ಮನೆ ಸಮೀಕ್ಷೆ
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಸಂತೋಷ್ ಲಾಡ್‌ಗೆ ಡಿಸಿಎಂ, ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಸಕಲ ಮರಾಠ ಸಮಾಜ ಆಗ್ರಹ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Bengaluru

About US

Anukshana Kannada News is a Bengaluru-based digital news platform covering metro city updates with speed and accuracy. We proudly reach over 1 million readers, keeping the city informed every day.

Subscribe US

Subscribe to our newsletter to get our newest articles instantly!

© Foxiz News Network. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?