Full site
Politics

30 ಮಹಡಿ ಹೊಸ ಬಿಡಿಎ ಕಚೇರಿ: ಹಾಲಿ ಕಟ್ಟಡ ನೆಲಸಮಕ್ಕೆ ಆಕ್ಷೇಪ

ಬೆಂಗಳೂರು: ಕುಮಾರಪಾರ್ಕ್‌ನಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಾಲಿ ಪ್ರಧಾನ ಕಚೇರಿ ಕಟ್ಟಡಗಳನ್ನು ತೆರವುಗೊಳಿಸಿ ಸುಮಾರು 30 ಮಹಡಿಗಳ ಹೊಸ ಕಚೇರಿ ಸಂಕೀರ್ಣ ನಿರ್ಮಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತವಾಗಿದೆ.

ಸುಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಅಗತ್ಯವೇನು ಎಂಬ ಪ್ರಶ್ನೆ ಎದ್ದಿದ್ದು, ಇದರಿಂದ ಸಾರ್ವಜನಿಕ ಹಣ ವ್ಯರ್ಥವಾಗುವುದರ ಜೊತೆಗೆ ಆವರಣದಲ್ಲಿರುವ ಹಳೆಯ ಮರಗಳು ಹಾಗೂ ಹಸಿರು ಪ್ರದೇಶಕ್ಕೂ ಹಾನಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಹಾಲಿ ಕಟ್ಟಡಗಳ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿ, ಯೋಜನೆಯ ಅಗತ್ಯತೆಯನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

Read the full story on Anukshana