ಬಿಸಿಲಿನಿಂದ ರಕ್ಷಣೆ: GBA ಹೊಸ ಕ್ರಮ
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಜನರನ್ನು, ವಿಶೇಷವಾಗಿ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ರಕ್ಷಿಸಲು GBA ಹೊಸ ‘ಶಾಖ-ಆರೋಗ್ಯ ಪ್ರೋಟೋಕಾಲ್’ ಜಾರಿಗೊಳಿಸಿದೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರಿನ ಸರಾಸರಿ ತಾಪಮಾನ ಸುಮಾರು 0.5°C ಹೆಚ್ಚಾಗಿದ್ದು, 2024ರ ಏಪ್ರಿಲ್‌ನಲ್ಲಿ ಕೆಲವು ಪ್ರದೇಶಗಳಲ್ಲಿ 40°C ತಲುಪಿತ್ತು. ಬಿಸಿಲು ಹೆಚ್ಚಾದಾಗ ಜನರು ತಂಪಾಗಿ ವಿಶ್ರಾಂತಿ ಪಡೆಯಲು 162 ಇಂದಿರಾ ಕ್ಯಾಂಟೀನ್‌ಗಳನ್ನು ಕೂಲಿಂಗ್ ಸೆಂಟರ್‌ಗಳಾಗಿ ಬಳಸಲಾಗುತ್ತದೆ. 417 ಸರ್ಕಾರಿ ಆರೋಗ್ಯ ಕೇಂದ್ರಗಳು, 108 ನಮ್ಮ ಕ್ಲಿನಿಕ್, 140 UPHC ಹಾಗೂ 7 ಆಸ್ಪತ್ರೆಗಳು ನೆರವಿಗೆ ಸಿದ್ಧವಾಗಿರಲಿವೆ.