ಮಂತ್ರಿ ಶಾಪಿಂಗ್ ಫೆಸ್ಟಿವಲ್ಗೆ ಭೂಮಿ ಪೆಡ್ನೇಕರ್ ಮೆರುಗು
ಮಳೆ ನಡುವೆಯೂ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶಾಪಿಂಗ್ ಜೊತೆಗೆ ಅನುಭವ, ಮನರಂಜನೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಮಹತ್ವವನ್ನು ನಟಿ ಹಂಚಿಕೊಂಡರು.
ಬೆಂಗಳೂರು: ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರು ಶುಕ್ರವಾರ ಬೆಂಗಳೂರಿನ ಮಂಂತ್ರಿ ಸ್ಕ್ವೇರ್ನಲ್ಲಿ ನಡೆದ ಮಂಂತ್ರಿ ಶಾಪಿಂಗ್ ಫೆಸ್ಟಿವಲ್ನಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು. ಮಳೆಯ ನಡುವೆಯೂ ನಟಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಗ್ರಾಹಕರು ಆಗಮಿಸಿದ್ದರು.
ಶಾಪಿಂಗ್ ಫೆಸ್ಟಿವಲ್ಗೆ ಚಾಲನೆ ನೀಡಿ ಮಾತನಾಡಿದ ಭೂಮಿ ಪೆಡ್ನೇಕರ್, ಹಬ್ಬದ ಸಮಯವು ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ಸಂತೋಷ ಹಂಚಿಕೊಳ್ಳಲು ಉತ್ತಮ ಸಂದರ್ಭವಾಗಿದೆ ಎಂದರು. ಶಾಪಿಂಗ್ ಮಾಡುವಾಗ ಗ್ರಾಹಕರು ಕೇವಲ ವಸ್ತುಗಳನ್ನು ಖರೀದಿಸುವುದಕ್ಕಿಂತ ಅದರ ಅನುಭವವನ್ನೂ ಆನಂದಿಸಬೇಕು ಎಂದು ಅವರು ಹೇಳಿದರು.
ತಮ್ಮ ಫ್ಯಾಷನ್ ಆಯ್ಕೆಗಳ ಕುರಿತು ಮಾತನಾಡಿದ ಭೂಮಿ, ಇತರರನ್ನು ಅನುಕರಿಸುವ ಬದಲು ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಲು ಆದ್ಯತೆ ನೀಡುವುದಾಗಿ ತಿಳಿಸಿದರು. ತಾವು ಸಿದ್ಧಗೊಳ್ಳುವುದನ್ನು ಹಾಗೂ ಫ್ಯಾಷನ್ ಅನ್ನು ಆನಂದಿಸುವುದಾಗಿ ಹೇಳಿದ ಅವರು, ಟ್ರೆಂಡ್ಗಳನ್ನು ಅನುಸರಿಸುವುದರ ಜೊತೆಗೆ ಸ್ವಂತ ಶೈಲಿಯನ್ನು ಉಳಿಸಿಕೊಳ್ಳುವುದು ಮುಖ್ಯ ಎಂದರು.
ಆನ್ಲೈನ್ ಶಾಪಿಂಗ್ಗಿಂತ ವೈಯಕ್ತಿಕವಾಗಿ ಅಂಗಡಿಗಳಿಗೆ ತೆರಳಿ ಶಾಪಿಂಗ್ ಮಾಡುವ ಅನುಭವವನ್ನು ತಾವು ಹೆಚ್ಚು ಇಷ್ಟಪಡುತ್ತೇನೆ ಎಂದು ಭೂಮಿ ಹೇಳಿದರು. ಕುಟುಂಬದವರು ಅಥವಾ ಆತ್ಮೀಯರೊಂದಿಗೆ ಶಾಪಿಂಗ್ ಮಾಡುವುದರಿಂದ ಅದು ಮತ್ತಷ್ಟು ಆನಂದದಾಯಕವಾಗುತ್ತದೆ ಎಂದರು.
ಸಸ್ಟೇನಬಲ್ ಫ್ಯಾಷನ್ ಕುರಿತು ಮಾತನಾಡಿದ ಅವರು, ಭಾರತೀಯ ಜೀವನಶೈಲಿಯಲ್ಲಿ ಹಿಂದಿನಿಂದಲೂ ಮರುಬಳಕೆ ಮತ್ತು ಸುಸ್ಥಿರತೆಯ ಅಂಶಗಳಿವೆ ಎಂದು ಅಭಿಪ್ರಾಯಪಟ್ಟರು. ಭಾರತೀಯ ಸಂಸ್ಕೃತಿಯಲ್ಲಿರುವ ಈ ಪರಂಪರೆಯನ್ನು ಮುಂದಿನ ಪೀಳಿಗೆಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ದೇಹದ ಕುರಿತ ಸಾಮಾಜಿಕ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಭೂಮಿ, ಪ್ರತಿಯೊಬ್ಬರೂ ತಮ್ಮ ದೇಹವನ್ನು ಗೌರವಿಸಿ, ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದರು. ನಟಿಯಾಗಿ ಪಾತ್ರಕ್ಕೆ ಅನುಗುಣವಾಗಿ ತಮ್ಮ ದೇಹದಲ್ಲಿ ಬದಲಾವಣೆ ಮಾಡಿಕೊಳ್ಳುವುದು ವೃತ್ತಿಯ ಭಾಗವಾಗಿದ್ದರೂ, ಸಾಮಾನ್ಯ ಜೀವನದಲ್ಲಿ ಸಾಮಾಜಿಕ ಒತ್ತಡಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಮಂಂತ್ರಿ ಸ್ಕ್ವೇರ್ ಆಡಳಿತ ಮಂಡಳಿ ಮಾತನಾಡಿ, ಇಂದಿನ ದಿನಗಳಲ್ಲಿ ಶಾಪಿಂಗ್ ಮಾಲ್ಗಳು ಕೇವಲ ಖರೀದಿ ಕೇಂದ್ರಗಳಲ್ಲ; ಅವು ಕುಟುಂಬ, ಸ್ನೇಹಿತರು ಮತ್ತು ಸಮುದಾಯ ಒಂದಾಗಿ ಸಮಯ ಕಳೆಯುವ ತಾಣಗಳಾಗುತ್ತಿವೆ ಎಂದು ತಿಳಿಸಿತು. ಶಾಪಿಂಗ್ ಫೆಸ್ಟಿವಲ್ನಲ್ಲಿ ವಿವಿಧ ಖರೀದಿ ಮೊತ್ತಗಳಿಗೆ ಅನುಗುಣವಾಗಿ ಉಡುಗೊರೆಗಳು ಮತ್ತು ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.
ಭೂಮಿ ಪೆಡ್ನೇಕರ್ ಅವರು ಮಂಂತ್ರಿ ಶಾಪಿಂಗ್ ಫೆಸ್ಟಿವಲ್ಗೆ ಆಗಮಿಸಿದ್ದಕ್ಕಾಗಿ ಆಯೋಜಕರು ಕೃತಜ್ಞತೆ ಸಲ್ಲಿಸಿದರು. ಬೆಂಗಳೂರಿನ ಅಭಿಮಾನಿಗಳ ಉತ್ಸಾಹಕ್ಕೆ ನಟಿಯೂ ಮೆಚ್ಚುಗೆ ವ್ಯಕ್ತಪಡಿಸಿದರು.