Full site
Launch

ಬೆಂಗಳೂರಿನಲ್ಲಿ ಯುಗೆನಿಕ್ಸ್ ಹೇರ್ ಸೈನ್ಸಸ್ ನೂತನ ಅತ್ಯಾಧುನಿಕ ಕೇಂದ್ರ ಆರಂಭ

1 min read

ಬೆಂಗಳೂರು: ಭಾರತದ ಪ್ರಮುಖ ಕೂದಲು ಕಸಿ (Hair Restoration) ಸಂಸ್ಥೆಗಳಲ್ಲಿ ಒಂದಾದ ಯುಗೆನಿಕ್ಸ್ ಹೇರ್ ಸೈನ್ಸಸ್ ಬೆಂಗಳೂರಿನ ಇಂದಿರಾನಗರ-ದೊಂಬಲೂರು ಪ್ರದೇಶದಲ್ಲಿ ತನ್ನ ನೂತನ ಅತ್ಯಾಧುನಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.

6,000 ಚದರ ಅಡಿಗೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಈ ಕೇಂದ್ರದಲ್ಲಿ 6 ಶಸ್ತ್ರಚಿಕಿತ್ಸಾ ಕೊಠಡಿಗಳು ಸೇರಿದಂತೆ ಆಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಅನುಭವಿ ವೈದ್ಯರ ತಂಡದೊಂದಿಗೆ ಜಾಗತಿಕ ಮಟ್ಟದ ಕೂದಲು ಪುನರ್ ಸ್ಥಾಪನೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

ಯುಗೆನಿಕ್ಸ್‌ನ ದೇಶದ ಐದನೇ ಕೇಂದ್ರವಾಗಿರುವ ಈ ಘಟಕವು ಗುರುಗ್ರಾಮ, ಮುಂಬೈ, ಹೈದರಾಬಾದ್ ಮತ್ತು ಭುವನೇಶ್ವರದ ನಂತರ ಬೆಂಗಳೂರಿನಲ್ಲಿ ಆರಂಭವಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಂಗಳೂರು ವೈದ್ಯಕೀಯ ಕ್ಷೇತ್ರದಲ್ಲೂ ವಿಶ್ವಮಟ್ಟದ ಗುರುತನ್ನು ಹೊಂದಿದ್ದು, ಇಂತಹ ಸಂಸ್ಥೆಗಳು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ ಎಂದು ಹೇಳಿದರು.

ಯುಗೆನಿಕ್ಸ್ ಸಹ-ಸಂಸ್ಥಾಪಕರಾದ ಡಾ. ಪ್ರದೀಪ್ ಸೇಠಿ ಮತ್ತು ಡಾ. ಅರಿಕಾ ಬನ್ಸಾಲ್ ಅವರು ತಂತ್ರಜ್ಞಾನ ಆಧಾರಿತ ಗುಣಮಟ್ಟದ ಕೂದಲು ಕಸಿ ಸೇವೆಯನ್ನು ಬೆಂಗಳೂರಿನ ಜನತೆಗೆ ತಲುಪಿಸುವುದು ಸಂಸ್ಥೆಯ ಗುರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಪದ್ಮಶ್ರೀ ಪುರಸ್ಕೃತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ಮರಳು ಶಿಲ್ಪ ಪ್ರದರ್ಶನ ನೀಡಿದರು.

ಕಳೆದ 15 ವರ್ಷಗಳಲ್ಲಿ 22,000ಕ್ಕೂ ಹೆಚ್ಚು ಯಶಸ್ವಿ ಕೂದಲು ಕಸಿ ಚಿಕಿತ್ಸೆಯನ್ನು ಪೂರ್ಣಗೊಳಿಸಿರುವ ಯುಗೆನಿಕ್ಸ್, ಡೈರೆಕ್ಟ್ ಹೇರ್ ಟ್ರಾನ್ಸ್‌ಪ್ಲಾಂಟೇಶನ್ (DHT) ವಿಧಾನಕ್ಕಾಗಿ ಗುರುತಿಸಿಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

Read the full story on Anukshana