Full site
Events

ಮಹಿಳಾ ನಿರ್ದೇಶಕಿಯರ ಕನಸುಗಳಿಗೆ ಮತ್ತೊಂದು ವೇದಿಕೆ; ವಿಜಯಪುರದಲ್ಲಿ ‘ಅವಳ ಹೆಜ್ಜೆ 2026’ ಮರುಪ್ರದರ್ಶನ

1 min read

ವಿಜಯಪುರ: ಮಹಿಳಾ ನಿರ್ದೇಶಕಿಯರ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿರುವ ‘ಅವಳ ಹೆಜ್ಜೆ ಕಿರುಚಿತ್ರೋತ್ಸವ 2026’ರ ವಿಶೇಷ ಮರುಪ್ರದರ್ಶನವು ಸೆಪ್ಟೆಂಬರ್ 24ರಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ (KSAWUV) ನಡೆಯಲಿದೆ.

ಕಳೆದ ಮೇ ತಿಂಗಳಲ್ಲಿ ಯಶಸ್ವಿಯಾಗಿ ನಡೆದ ಮುಖ್ಯ ಕಿರುಚಿತ್ರೋತ್ಸವ ಹಾಗೂ ಜುಲೈನಲ್ಲಿ ಬೆಂಗಳೂರಿನ IIWCಯಲ್ಲಿ ಆಯೋಜಿಸಲಾಗಿದ್ದ ಮರುಪ್ರದರ್ಶನದ ಮುಂದುವರಿದ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಚಿತ್ರರಂಗದಲ್ಲಿ ಮಹಿಳೆಯರ ಪಾತ್ರವು ಕೇವಲ ತೆರೆಯ ಮೇಲಿನ ಅಭಿನಯಕ್ಕೆ ಸೀಮಿತವಾಗದೆ, ಕ್ಯಾಮೆರಾ ಹಿಂದೆಯೂ ಮಹಿಳೆಯರ ಸೃಜನಶೀಲ ಧ್ವನಿಗೆ ಅವಕಾಶ ಸಿಗಬೇಕು ಎಂಬ ಆಶಯದೊಂದಿಗೆ ‘ಅವಳ ಹೆಜ್ಜೆ’ ಕಿರುಚಿತ್ರೋತ್ಸವವನ್ನು ರೂಪಿಸಲಾಗಿದೆ. ಮಹಿಳಾ ನಿರ್ದೇಶಕಿಯರ ಕಥನಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಅವರ ಪ್ರತಿಭೆಯನ್ನು ಗುರುತಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಕಿರುಚಿತ್ರ ಪ್ರದರ್ಶನಗಳ ಜೊತೆಗೆ, ಗುಬ್ಬಿವಾಣಿ ಟ್ರಸ್ಟ್ ಯುವಜನರಿಗಾಗಿ ವಿವಿಧ ಕಾರ್ಯಾಗಾರಗಳು ಹಾಗೂ ಇಂಟರ್ನ್‌ಶಿಪ್ ಅವಕಾಶಗಳನ್ನು ಸಹ ಒದಗಿಸುತ್ತಿದೆ. ಈ ರೀತಿಯ ಸೃಜನಾತ್ಮಕ ಕಾರ್ಯಕ್ರಮಗಳನ್ನು ಸಹಯೋಗದಲ್ಲಿ ಆಯೋಜಿಸಲು ಆಸಕ್ತಿ ಹೊಂದಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಟ್ರಸ್ಟ್‌ನ್ನು ಸಂಪರ್ಕಿಸಬಹುದು.

ಮಾಧ್ಯಮ ಮಾಹಿತಿ, ಇಂಟರ್ನ್‌ಶಿಪ್ ಅರ್ಜಿ ಹಾಗೂ ಸಹಯೋಗಕ್ಕಾಗಿ ಸಂಪರ್ಕಿಸಿ:

🌐 ವೆಬ್‌ಸೈಟ್: www.gubbivanitrust.ngo

📞 72599 36111 | 88677 47236

✉️ gubbivanitrust@gmail.com

– ಶಾಂತಲಾ ದಾಮ್ಲೆ

ಕಾರ್ಯಕ್ರಮ ನಿರ್ದೇಶಕಿ, ‘ಅವಳ ಹೆಜ್ಜೆ’

ಗುಬ್ಬಿವಾಣಿ ಟ್ರಸ್ಟ್

Read the full story on Anukshana