ಆಧುನಿಕ ಬದುಕಿನಲ್ಲಿ ಬಸವ ತತ್ವಗಳೇ ದಾರಿದೀಪ: ಅಟವಿ ಚನ್ನಬಸವ ಸ್ವಾಮಿ
104ನೇ ಶರಣ ಸಂಗಮದಲ್ಲಿ ಅಟವಿ ಚನ್ನಬಸವ ಸ್ವಾಮಿ ಕರೆ | ಆಧುನಿಕ ಜೀವನದಲ್ಲಿ ಸಂಸ್ಕಾರ, ಆಧ್ಯಾತ್ಮಿಕತೆ ಹಾಗೂ ಬಸವ ತತ್ವಗಳ ಅಳವಡಿಕೆಗೆ ಒತ್ತು
ಬೆಂಗಳೂರು ಅಕ್ಟೋಬರ್ 8; ಶರಣ ಮತ್ತು ಜಂಗಮಕ್ಕೆಅಳಿವಿಲ್ಲ, ಬಸವಣ್ಣನವರ ಪಂಚಚಾರ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಗುಬ್ಬಿಯ ಆಟವಿ ಸಿದ್ದೇಶ್ವರ ತೊರೆಮಠದ ಅಟವಿ ಚನ್ನ ಬಸವ ಸ್ವಾಮಿ ತಿಳಿಸಿದರು.
ರಾಷ್ಟ್ರೀಯ ಬಸವ ತತ್ವ ಪರಿಷತ್ತಿನ 104ನೇ ತಿಂಗಳ ಶರಣ ಸಂಗಮ ಕಾರ್ಯಕ್ರಮ ದಲ್ಲಿ ಮಾತನಾಡಿ,ಬಸವಣ್ಣನವರಿಗೆ ಇಬ್ಬರು ಪತ್ನಿಯರು ಇದ್ದರೂ ಸಾಂಸಾರಿಕ ಜಂಜಾಟದ ನಡುವೆ ಶರಣ ತತ್ವಗಳನ್ನು ಅಳವಡಿಸಿಕೊಂಡಿದ್ದರು,ಆಧ್ಯಾತ್ಮಿಕತೆ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳಬೇಕು,ಆಧುನಿಕ ಯುಗದಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ,ವೈಭವದ ಜೀವನಕ್ಕೆ ಮೊರೆ ಹೋಗುತ್ತಿದ್ದಾರೆ ಆದರಿಂದ ಶಿವನ ಪೂಜೆಯನ್ನು ಭಕ್ತಿಯಿಂದ ಮಾಡಬೇಕು ಎಂದು ಹೇಳಿದರು.
ಸಂಸ್ಕೃತಿ ಚಿಂತಕ ಪ್ರೋ ಗಿರಿಜಾ ಪತಿ ಮಾತನಾಡಿ,ಶರಣ ಎಂಬುದು ಒಂದು ಪದವಿ ಅದು ವೈಭವದ ಆಚರಣೆ ಅಲ್ಲ,ಬಸವಣ್ಣನವರು ನಮ್ಮ ಶರಣ ಕೂಡಲ ಸಂಗಮ ದೇವ ಎಂದು ಸಂಬೋಧಿಸುತ್ತಿದ್ದರು, ನಮ್ಮನ್ನು ನಾವು ವಿಮರ್ಶೆಗೆ ಒಳಪಡಿಸಿಕೊಂಡು ವಚನದ ಸಾರಗಳನ್ನು ಅಳವಡಿಸಿಕೊಳ್ಳಬೇಕು,ಶರಣ ಆಗಬೇಕದವರು ಮನುಷ್ಯರೇ ಹೊರತು ಬೇರೆಯವರು ಅಲ್ಲ ಎಂದರು.
ಪರಿಷತ್ತಿನ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ,104ನೇ ಶರಣ ಸಂಗಮದಲ್ಲಿ "ಶರಣ ಪರಿಕಲ್ಪನೆ" ಎಂಬ ವಿಷಯ ಕುರಿತ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.2016ರಂದು ಪ್ರಾರಂಭವಾದ ಶರಣ ಸಂಗಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.
ಜಾನಪದ ಗಾಯಕ ಅಪ್ಪುಗೆರೆ ತಿಮ್ಮರಾಜು ಮಾತನಾಡಿ,ಲಡಾಕ್ ನ ರಾಜನೊಬ್ಬ ಶರಣ ಬಸವಣ್ಣನವರ ಅನುಭವ ಮಂಟಪ್ಪಕ್ಕೆ ಮನಸೋತು ಅಲ್ಲಿಗೆ ಬಂದು ಅವರ ಸೇವೆ ಮಾಡಿದ್ದರು,ಅರುಣ್ ಕುಮಾರ್ ಅವರು 104ನೇ ಶರಣ ಸಂಗಮ ಕಾರ್ಯಕ್ರಮ ನಡೆಸಿಕೊಂಡು ಬರುವುದು ಅಷ್ಟು ಸುಲಭವಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿಜಯನಗರದ ಮುಕ್ತಾಯಕ್ಕ ಸಮಾಜದ ರತ್ನ ದೇಸಾಯಿ ತಂಡದವರಿಂದ ವಚನ ಗಾಯನ ನಡೆಯಿತು.
ವೆಸ್ಟ್ ಆಪ್ ಕಾರ್ಡ್ ರಸ್ತೆಯ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಅಭಿಷೇಕ್, ಡಿ.ಎಸ್. ಕರಿ ಬಸವಯ್ಯ,ರುದ್ರೇಶ್.ಸಿ. ಮತ್ತಿತರರು ಭಾಗವಹಿಸಿ