ಗಣೇಶ ವಿಸರ್ಜನೆಗೆ 42 ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ
ಗಣೇಶ ವಿಸರ್ಜನೆಗೆ 42 ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಸಿದ್ಧತೆ; ಮೂರ್ತಿ ಪ್ರತಿಷ್ಠಾಪನೆ ಅನುಮತಿಗಾಗಿ 122 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ
ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 42 ಕೆರೆ ಅಂಗಳದ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 659 ಮೊಬೈಲ್ ಟ್ಯಾಂಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯ ಅನುಮತಿಗಳನ್ನು ಸುಗಮವಾಗಿ ಪಡೆಯಲು 122 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ಹಾಗೂ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ನಗರ ಪಾಲಿಕೆವಾರು ಏಕಗವಾಕ್ಷಿ ಕೇಂದ್ರಗಳ ವಿವರ: ಪಶ್ಚಿಮ 22, ಕೇಂದ್ರ 24, ಪೂರ್ವ 17, ಉತ್ತರ 30 ಹಾಗೂ ದಕ್ಷಿಣ 29 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ವಿಸರ್ಜನೆ ವ್ಯವಸ್ಥೆಯಲ್ಲಿ ಪಶ್ಚಿಮ ವಲಯದಲ್ಲಿ 161 ಮೊಬೈಲ್ ಟ್ಯಾಂಕ್‌ಗಳು ಮತ್ತು 9 ಕಲ್ಯಾಣಿಗಳು, ಕೇಂದ್ರದಲ್ಲಿ 146 ಟ್ಯಾಂಕ್‌ಗಳು ಮತ್ತು 1 ಕಲ್ಯಾಣಿ, ಪೂರ್ವದಲ್ಲಿ 80 ಟ್ಯಾಂಕ್‌ಗಳು ಮತ್ತು 14 ಕಲ್ಯಾಣಿಗಳು, ಉತ್ತರದಲ್ಲಿ 113 ಟ್ಯಾಂಕ್‌ಗಳು ಮತ್ತು 12 ಕಲ್ಯಾಣಿಗಳು ಹಾಗೂ ದಕ್ಷಿಣದಲ್ಲಿ 159 ಟ್ಯಾಂಕ್‌ಗಳು ಮತ್ತು 6 ಕಲ್ಯಾಣಿಗಳನ್ನು ಸಿದ್ಧಪಡಿಸಲಾಗಿದೆ.
ವಿಸರ್ಜನಾ ಸ್ಥಳಗಳು, ಮೊಬೈಲ್ ಟ್ಯಾಂಕ್‌ಗಳು, ಏಕಗವಾಕ್ಷಿ ಕೇಂದ್ರಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ GBA ವೆಬ್‌ಸೈಟ್‌ನಲ್ಲಿರುವ ಗಣೇಶ ವಿಸರ್ಜನೆ ಲಿಂಕ್ ಮೂಲಕ ಪಡೆಯಬಹುದು.