Full site
Government

"ಇ-ಆಸ್ತಿ 2.0" ಸರಳೀಕೃತ ಹಾಗೂ ನೂತನ ಜಿಬಿಎ ಇ-ಖಾತಾ ವ್ಯವಸ್ಥೆ ಸೆ. 21 ರಿಂದ ಜಾರಿ

2 min read

ಬೆಂಗಳೂರು:

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಾಗರಿಕರಿಗೆ ಇನ್ನಷ್ಟು ಸರಳ, ವೇಗದ, ಪಾರದರ್ಶಕ ಹಾಗೂ ಸುಲಭವಾಗಿ ಬಳಸಬಹುದಾದ *"ಇ-ಆಸ್ತಿ 2.0"* ಸರಳೀಕೃತ ಹಾಗೂ ನೂತನ ಇ-ಖಾತಾ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದು, ಈ ನೂತನ ವ್ಯವಸ್ಥೆಯು *ಸೆಪ್ಟೆಂಬರ್ 21, 2026ರಿಂದ ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ* ರವರು ಸಾರ್ವಜನಿಕ ಬಳಕೆಗೆ ಸಮರ್ಪಿಸಲಿದ್ದಾರೆ ಎಂದು *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ರವರು ತಿಳಿಸಿದರು.

*ಹೊಸ ವೆಬ್‌ಸೈಟ್:*

https://GBAeAasthi.Karnataka.gov.in

ಈಗಾಗಲೇ 25 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ಆನ್‌ಲೈನ್ ಮೂಲಕ ವಿತರಿಸುವ ಮೂಲಕ ಚಿನ್ನದ ಪ್ರಶಸ್ತಿ ಪುರಸ್ಕೃತ ವ್ಯವಸ್ಥೆಯ ಮುಂದುವರಿದ ಆವೃತ್ತಿಯಾಗಿರುವ ಇ-ಆಸ್ತಿ 2.0 ಅನ್ನು, ನಾಗರಿಕರು ಇ-ಖಾತಾ ಸಂಬಂಧಿತ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

ನೂತನ ವ್ಯವಸ್ಥೆಯ ಮೂಲಕ ಸಂಪೂರ್ಣ ಇ-ಖಾತಾ(Complete e-Khata) ಸೇರಿದಂತೆ ವಿವಿಧ ಇ-ಖಾತಾ ಸೇವೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದ್ದು, ಹೆಚ್ಚಿನ ಪ್ರಮಾಣದ ಸೇವೆಗಳನ್ನು ಸ್ವಯಂಚಾಲಿತಗೊಳಿಸುವುದರ ಜೊತೆಗೆ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

*ಇ-ಆಸ್ತಿ 2.0ರ ಪ್ರಮುಖ ವೈಶಿಷ್ಟ್ಯಗಳು::*

* *ಸರಳ ಮತ್ತು ಆಧುನಿಕ ವಿನ್ಯಾಸ:* ನಾಗರಿಕರು ಸುಲಭವಾಗಿ ಬಳಸಿಕೊಳ್ಳುವಂತೆ ಸರಳ ಹಾಗೂ ಬಳಕೆದಾರ ಸ್ನೇಹಿ ಇಂಟರ್‌ಫೇಸ್.

* *ಒಂದೇ ವೇದಿಕೆಯಲ್ಲಿ ಸೇವೆಗಳು:* ಪ್ರಮುಖ ಇ-ಖಾತಾ ಹಾಗೂ ಆಸ್ತಿ ಸಂಬಂಧಿತ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯುವ ಅವಕಾಶ.

* *KAVERI ಜತೆ ನೇರ ಸಂಪರ್ಕ:* ಖಾತಾ ಮ್ಯೂಟೇಷನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು KAVERI ವ್ಯವಸ್ಥೆಯೊಂದಿಗೆ ನೇರ ಏಕೀಕರಣ.

* *ಅರ್ಜಿಯ ಸ್ಥಿತಿಯ ನೈಜ-ಸಮಯ ಮಾಹಿತಿ:* ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಯಾವುದೇ ಸಮಯದಲ್ಲಿ ಆನ್‌ಲೈನ್ ಮೂಲಕ ಪರಿಶೀಲಿಸುವ ಅವಕಾಶ.

*ಸೆಪ್ಟೆಂಬರ್ 21ರಿಂದ ಲಭ್ಯವಾಗುವ ಸೇವೆಗಳು:*

1. ಡ್ರಾಫ್ಟ್ ಇ-ಖಾತಾವನ್ನು ಅಂತಿಮ ಇ-ಖಾತಾವಾಗಿ ಪರಿವರ್ತಿಸುವುದು.

2. ಮ್ಯೂಟೇಷನ್‌ನೊಂದಿಗೆ ಅಂತಿಮ ಇ-ಖಾತಾ ವಿತರಣೆ.

3. KAVERI–ಮ್ಯೂಟೇಷನ್ ಏಕೀಕರಣ.

4. ಅರ್ಜಿಯ ಸ್ಥಿತಿಯನ್ನು ನೈಜ-ಸಮಯದಲ್ಲಿ ಆನ್‌ಲೈನ್ ಮೂಲಕ ಪರಿಶೀಲಿಸುವ ವ್ಯವಸ್ಥೆ.

5. B-ಖಾತಾದಿಂದ A-ಖಾತಾಗೆ ಪರಿವರ್ತನೆ.

*ಮುಂದಿನ ಕೆಲವು ದಿನಗಳಲ್ಲಿ ಲಭ್ಯವಾಗುವ ಸೇವೆಗಳು*

* ಹೊಸ ಖಾತಾ ನೋಂದಣಿ.

* ಅಪಾರ್ಟ್‌ಮೆಂಟ್‌ಗಳು ಹಾಗೂ ಬಹುಮಹಡಿ ಕಟ್ಟಡಗಳಿಗೆ ಬಲ್ಕ್ ಖಾತಾ ಪ್ರಕ್ರಿಯೆ.

* ಅಂತಿಮ(Complete/Final) ಇ-ಖಾತಾಗಳಲ್ಲಿನ ತಿದ್ದುಪಡಿಗಳಿಗೆ ಅವಕಾಶ.

* ನಿವೇಶನಗಳ ವಿಭಜನೆ (Site Bifurcation) ಹಾಗೂ ವಿಲೀನ (Amalgamation) ಸೇವೆಗಳು.

ನೂತನ ಇ-ಆಸ್ತಿ 2.0 ವ್ಯವಸ್ಥೆಯು ಇ-ಖಾತಾ ಸೇವೆಗಳನ್ನು ಹೆಚ್ಚು ಸರಳ, ಪಾರದರ್ಶಕ ಹಾಗೂ ನಾಗರಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಡಿಜಿಟಲ್ ಸೇವೆಗಳ ಮೂಲಕ ನಾಗರಿಕರಿಗೆ ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಸೇವೆ ಒದಗಿಸುವ GBAಯ ಪ್ರಯತ್ನಗಳ ಭಾಗವಾಗಿದೆ.

ಶ್ರೀ ಮಹೇಶ್ವರ ರಾವ್ ಅವರು, ಹೊಸ ಹಾಗೂ ನಾಗರಿಕ ಸ್ನೇಹಿ eKhata 2.0 ವ್ಯವಸ್ಥೆಗೆ ಪರಿವರ್ತನೆಯ ಸಂದರ್ಭದಲ್ಲಿ ನಾಗರಿಕರು ತಮ್ಮ ಸಹಕಾರ ಮತ್ತು ಬೆಂಬಲವನ್ನು ನೀಡುವಂತೆ ಮನವಿ ಮಾಡಿದರು.

Read the full story on Anukshana