ಕೋಬ್ರಾ ವಿಷಕ್ಕೆ ಹೊಸ ಆ್ಯಂಟಿವೆನಮ್: ಐಐಎಸ್‌ಸಿ ಮಹತ್ವದ ಸಾಧನೆ
ನ್ಯಾನೋಬಾಡಿ ಆಧಾರಿತ ಪುನರ್‌ಸಂಯೋಜಿತ ಆ್ಯಂಟಿವೆನಮ್ ಅಭಿವೃದ್ಧಿ
ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕರು ಕೋಬ್ರಾ ಮತ್ತು ಕಾಳಿಂಗ ಸರ್ಪಗಳ ವಿಷದ ವಿರುದ್ಧ ವ್ಯಾಪಕ ರಕ್ಷಣೆ ನೀಡಬಲ್ಲ ನ್ಯಾನೋಬಾಡಿ ಆಧಾರಿತ ಆ್ಯಂಟಿವೆನಮ್ ಅಭಿವೃದ್ಧಿಪಡಿಸಿದ್ದಾರೆ. ಐದು ನ್ಯಾನೋಬಾಡಿಗಳ ಸಂಯೋಜನೆಯ ಈ ಆ್ಯಂಟಿವೆನಮ್ ಕನ್ನಡಕ ಕೋಬ್ರಾ, ಮೊನೋಕಲ್ ಕೋಬ್ರಾ ಹಾಗೂ ಕಾಳಿಂಗ ಸರ್ಪಗಳ ವಿಷದ ವಿರುದ್ಧ ಪರಿಣಾಮಕಾರಿ ಎಂದು ಇಲಿಗಳ ಪರೀಕ್ಷೆಯಲ್ಲಿ ಕಂಡುಬಂದಿದೆ. ವಿಷ ಚುಚ್ಚಿದ 30 ನಿಮಿಷಗಳ ಬಳಿಕವೂ ಇಲಿಗಳನ್ನು ಸಾವಿನಿಂದ ರಕ್ಷಿಸಿದ್ದು, ಕಡಿಮೆ ಪ್ರಮಾಣದಲ್ಲೇ ಪರಿಣಾಮಕಾರಿ ಎಂದು ಸಂಶೋಧಕರು ತಿಳಿಸಿದ್ದಾರೆ.