Full site
Sports

ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್: ಜಪಾನ್‌ನ ಡೆನ್ಸೊ ಐರಿಸ್ ಚಾಂಪಿಯನ್

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್‌ನ ಡೆನ್ಸೊ ಐರಿಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡ ರನ್ನರ್‌ಅಪ್ ಸ್ಥಾನ ಪಡೆದಿದೆ. ವಿಜೇತ ತಂಡಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ಟ್ರೋಫಿ ವಿತರಿಸಿದರು.

By Anukshana News Desk1 min read

ಬೆಂಗಳೂರು: ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಪಾನ್‌ನ ಡೆನ್ಸೊ ಐರಿಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಜಪಾನ್‌ನ ಡೆನ್ಸೊ ಐರಿಸ್ ಹಾಗೂ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡಗಳ ನಡುವಿನ ರೋಚಕ ಫೈನಲ್ ಪಂದ್ಯವನ್ನು ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ವೀಕ್ಷಿಸಿದರು.

ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಡೆನ್ಸೊ ಐರಿಸ್ ತಂಡ ಹಾಗೂ ರನ್ನರ್‌ಅಪ್ ಸ್ಥಾನ ಪಡೆದ ಸಿಚುವಾನ್ ಯುಯಾಂದ ಮೀಲೆ ತಂಡಕ್ಕೆ ಡಾ. ಜಿ. ಪರಮೇಶ್ವರ ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ತಮಿಳುನಾಡಿನ ಕ್ರೀಡಾ ಸಚಿವ ಹಾಗೂ ಭಾರತೀಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಆಧವ್ ಅರ್ಜುನ್, ಕರ್ನಾಟಕ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ದಯಾನಂದ ಹಾಗೂ ನಟಿ ರಮ್ಯಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Read the full story on Anukshana