ಕಲಾಮಂದಿರ್ನ 87ನೇ ಮಳಿಗೆ ಉದ್ಘಾಟಿಸಿದ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ನಟಿ ರಚಿತಾ ರಾಮ್; 100ನೇ ಮಳಿಗೆಯನ್ನೂ ನಾನೇ ಉದ್ಘಾಟಿಸಬೇಕು ಎಂದ ಡಿಂಪಲ್ ಕ್ವೀನ್!
ಯಲಹಂಕದಲ್ಲಿ ಕಲಾಮಂದಿರ್ನ ನೂತನ ಶೋರೂಂಗೆ ಚಾಲನೆ ನೀಡಿದ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್; ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಒಂದೇ ಸೂರಿನಡಿ ಉಡುಪುಗಳ ಸಂಗ್ರಹ; ₹4,000 ಖರೀದಿಗೆ ₹2,000 ಗಿಫ್ಟ್ ವೋಚರ್ ವಿಶೇಷ ಕೊಡುಗೆ
ಬೆಂಗಳೂರು: ಭಾರತದ ಪ್ರಮುಖ ಎಥ್ನಿಕ್ ಮತ್ತು ಫ್ಯಾಮಿಲಿ ಫ್ಯಾಷನ್ ರಿಟೇಲರ್ಗಳಲ್ಲಿ ಒಂದಾದ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್ (SSKL), ಬೆಂಗಳೂರಿನ ಯಲಹಂಕ ಉಪನಗರದ ಡೈರಿ ಸರ್ಕಲ್ ಬಳಿ ತನ್ನ 87ನೇ ಮಳಿಗೆಯನ್ನು ಅಕ್ಟೋಬರ್ 31ರಂದು ಅದ್ಧೂರಿಯಾಗಿ ಆರಂಭಿಸಿದೆ. ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಜನಪ್ರಿಯ ಕನ್ನಡ ಚಲನಚಿತ್ರ ನಟಿ ರಚಿತಾ ರಾಮ್ ಅವರು ನೂತನ ಶೋರೂಂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಹಕರು, ಹಿತೈಷಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
21 ವರ್ಷಗಳ ರಿಟೇಲ್ ಕ್ಷೇತ್ರದ ಅನುಭವ ಹೊಂದಿರುವ ಕಲಾಮಂದಿರ್, ದಕ್ಷಿಣ ಭಾರತದಾದ್ಯಂತ ತನ್ನ ಗುಣಮಟ್ಟದ ಫ್ಯಾಷನ್ ಸಂಗ್ರಹಗಳು ಹಾಗೂ ಗ್ರಾಹಕ ಸ್ನೇಹಿ ಸೇವೆಯ ಮೂಲಕ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ವ್ಯವಸ್ಥಾಪಕ ನಿರ್ದೇಶಕ ಹಾಗೂ ನಿರ್ದೇಶಕ ಪ್ರಸಾದ್ ಚಲವಾದಿ ಅವರ ನೇತೃತ್ವದಲ್ಲಿ ಸಂಸ್ಥೆ ತನ್ನ ಚಿಲ್ಲರೆ ವ್ಯಾಪಾರ ಜಾಲವನ್ನು ವಿಸ್ತರಿಸುತ್ತಿದೆ.
ಯಲಹಂಕದ ನೂತನ ಶೋರೂಂ ಸಂಪೂರ್ಣ ಕೌಟುಂಬಿಕ ಶಾಪಿಂಗ್ ತಾಣವಾಗಿದ್ದು, ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ವೈವಿಧ್ಯಮಯ ಉಡುಪುಗಳ ಸಂಗ್ರಹವನ್ನು ಒಳಗೊಂಡಿದೆ. ಮದುವೆ, ಹಬ್ಬಗಳು, ವಿಶೇಷ ಸಮಾರಂಭಗಳು ಹಾಗೂ ದೈನಂದಿನ ಬಳಕೆಗೆ ಹೊಂದುವ ರೇಷ್ಮೆ ಸೀರೆಗಳು, ಫ್ಯಾನ್ಸಿ ಸೀರೆಗಳು, ರೆಡಿಮೇಡ್ ಉಡುಪುಗಳು, ಪುರುಷರ ಉಡುಪುಗಳು ಮತ್ತು ಮಕ್ಕಳ ಉಡುಪುಗಳು ಒಂದೇ ಸೂರಿನಡಿ ಲಭ್ಯವಿವೆ.
ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಉಡುಪುಗಳು ಲಭ್ಯ: ರಚಿತಾ ರಾಮ್
ಉದ್ಘಾಟನೆಯ ಬಳಿಕ ಮಾತನಾಡಿದ ನಟಿ ರಚಿತಾ ರಾಮ್, ಕಲಾಮಂದಿರ್ನಲ್ಲಿ ಎಲ್ಲ ವರ್ಗದ ಗ್ರಾಹಕರಿಗೂ ತಮ್ಮ ಬಜೆಟ್ಗೆ ಅನುಗುಣವಾಗಿ ಖರೀದಿ ಮಾಡುವ ಅವಕಾಶವಿದೆ ಎಂದು ಹೇಳಿದರು.
"ಇಲ್ಲಿ ದುಬಾರಿ ಉಡುಪುಗಳನ್ನು ಖರೀದಿಸುವವರಿಗೂ ಹಾಗೂ ಕೈಗೆಟುಕುವ ದರದಲ್ಲಿ ಖರೀದಿ ಮಾಡಲು ಬಯಸುವವರಿಗೂ ಸಾಕಷ್ಟು ಆಯ್ಕೆಗಳಿವೆ. ಎಲ್ಲರೂ ಬಂದು ಖರೀದಿಸಬಹುದಾದಂತಹ ಸಂಗ್ರಹಗಳು ಇಲ್ಲಿವೆ. ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರು ಹಾಗೂ ಮಕ್ಕಳಿಗೂ ಉತ್ತಮ ಕಲೆಕ್ಷನ್ಗಳಿವೆ. ದಯವಿಟ್ಟು ಎಲ್ಲರೂ ಕಲಾಮಂದಿರ್ಗೆ ಭೇಟಿ ನೀಡಿ" ಎಂದು ಆಹ್ವಾನಿಸಿದರು.
ತಮ್ಮ ನೆಚ್ಚಿನ ಬಣ್ಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಳದಿ ಬಣ್ಣವೆಂದರೆ ತಮಗೆ ತುಂಬಾ ಇಷ್ಟ ಎಂದು ತಿಳಿಸಿದರು. "ಹಿಂದೆ ಕಲಾಮಂದಿರ್ ಶೋರೂಂಗೆ ಭೇಟಿ ನೀಡಿದಾಗಲೇ ನನ್ನ ನೆಚ್ಚಿನ ಬಣ್ಣ ಹಳದಿ ಎಂಬುದು ಅವರಿಗೆ ತಿಳಿದಿತ್ತು. ಇಂದು ಕೂಡ ನನಗಾಗಿ ಹಲವು ಹಳದಿ ಬಣ್ಣದ ಸೀರೆಗಳನ್ನು ತಂದು ಇಟ್ಟಿದ್ದರು. ಹಳದಿ ಬಣ್ಣ ನನಗೆ ತುಂಬಾ ಇಷ್ಟ" ಎಂದು ಸಂತಸ ಹಂಚಿಕೊಂಡರು.
'ಕಲಾಮಂದಿರ್ನ 100ನೇ ಮಳಿಗೆಯನ್ನೂ ನಾನೇ ಉದ್ಘಾಟಿಸಬೇಕು!'
ಕಲಾಮಂದಿರ್ ಈಗಾಗಲೇ 87ನೇ ಮಳಿಗೆ ಆರಂಭಿಸಿದ್ದು, ಶೀಘ್ರದಲ್ಲೇ 100ನೇ ಮಳಿಗೆಯ ಮೈಲಿಗಲ್ಲು ತಲುಪುವ ನಿರೀಕ್ಷೆಯ ಕುರಿತು ಕೇಳಿದಾಗ ರಚಿತಾ ರಾಮ್ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದರು.
"ನಾನು ಮೊದಲೇ ಹೇಳಿಬಿಡುತ್ತೇನೆ, ಕಲಾಮಂದಿರ್ನ 100ನೇ ಮಳಿಗೆಯೂ ನನ್ನದೇ ಆಗಿರಬೇಕು. ಕರ್ನಾಟಕದಲ್ಲೇ ಆ ಮಳಿಗೆ ಆರಂಭವಾಗಬೇಕು. ಅದನ್ನೂ ನಾನೇ ಉದ್ಘಾಟಿಸಬೇಕು" ಎಂದು ಹೇಳುವ ಮೂಲಕ ತಮ್ಮ ಆಶಯ ವ್ಯಕ್ತಪಡಿಸಿದರು.
₹4,000 ಖರೀದಿಗೆ ₹2,000 ಗಿಫ್ಟ್ ವೋಚರ್
ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್ನ ನಿರ್ದೇಶಕ ದುರ್ಗಾರಾವ್ ಚಲವಾದಿ ಅವರು, 87ನೇ ಮಳಿಗೆಯ ಉದ್ಘಾಟನೆಗೆ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದ ನಟಿ ರಚಿತಾ ರಾಮ್ ಹಾಗೂ ಬೆಂಬಲ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿದರು.
"ಬೆಂಗಳೂರಿನ ಯಲಹಂಕದಲ್ಲಿ ನಮ್ಮ 87ನೇ ಮಳಿಗೆಯನ್ನು ಆರಂಭಿಸುವ ಮೂಲಕ ಕಲಾಮಂದಿರ್ನ ಪರಂಪರೆಯನ್ನು ವಿಸ್ತರಿಸುತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗಿದೆ. ಗುಣಮಟ್ಟದ ಫ್ಯಾಷನ್ ಹಾಗೂ ವ್ಯಾಪಕ ಸಂಗ್ರಹಗಳನ್ನು ಗ್ರಾಹಕರಿಗೆ ಒದಗಿಸುವ ನಮ್ಮ ಬದ್ಧತೆಯನ್ನು ಈ ಮೈಲಿಗಲ್ಲು ಪ್ರತಿಬಿಂಬಿಸುತ್ತದೆ. ಪ್ರತಿ ತಲೆಮಾರಿನ ಬದಲಾಗುತ್ತಿರುವ ಫ್ಯಾಷನ್ ಅಗತ್ಯಗಳನ್ನು ಪೂರೈಸುವ ಸಂಪೂರ್ಣ ಕೌಟುಂಬಿಕ ಶಾಪಿಂಗ್ ಅನುಭವವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ" ಎಂದು ತಿಳಿಸಿದರು.
ಇದೇ ವೇಳೆ ಗ್ರಾಹಕರಿಗಾಗಿ ವಿಶೇಷ ಪ್ರಚಾರ ಕೊಡುಗೆಯನ್ನೂ ಘೋಷಿಸಿದರು. ₹4,000 ಮೌಲ್ಯದ ಖರೀದಿ ಮಾಡಿದ ಗ್ರಾಹಕರಿಗೆ ₹2,000 ಮೌಲ್ಯದ ಗಿಫ್ಟ್ ವೋಚರ್ ನೀಡಲಾಗುತ್ತದೆ. ಈ ವೋಚರ್ ಅನ್ನು ತಕ್ಷಣವೇ ಮುಂದಿನ ಖರೀದಿಗೆ ಬಳಸಿಕೊಳ್ಳಬಹುದು. ಕರ್ನಾಟಕದಲ್ಲಿ ಇಂತಹ ವಿಶೇಷ ಪ್ರಚಾರ ಕೊಡುಗೆಯನ್ನು ಮೊದಲ ಬಾರಿಗೆ ಪರಿಚಯಿಸುತ್ತಿರುವುದಾಗಿ ಅವರು ತಿಳಿಸಿದರು.
ಹೊಸ ಮಳಿಗೆಯ ಆರಂಭದೊಂದಿಗೆ ಬೆಂಗಳೂರಿನಲ್ಲಿ ತನ್ನ ರಿಟೇಲ್ ಜಾಲವನ್ನು ಮತ್ತಷ್ಟು ಬಲಪಡಿಸಿರುವ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್, ಗುಣಮಟ್ಟ, ವೈವಿಧ್ಯಮಯ ಸಂಗ್ರಹ ಹಾಗೂ ಸಂಪೂರ್ಣ ಕೌಟುಂಬಿಕ ಶಾಪಿಂಗ್ ಅನುಭವಕ್ಕೆ ಆದ್ಯತೆ ನೀಡಿದೆ.