ಅ.4 ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2026-27ನೇ ಸಾಲಿನ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ’ ಅಕ್ಟೋಬರ್ 4ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ.
ಖ್ಯಾತ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸಮಾರಂಭವನ್ನು ಉದ್ಘಾಟಿಸಿ ಕರ್ನಾಟಕ ಕಲಾಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಹಿರಿಯ ರಂಗಕರ್ಮಿ ಹಾಗೂ ಸಂಸ್ಕೃತಿ ಚಿಂತಕ ಡಾ. ಶ್ರೀನಿವಾಸ ಜಿ. ಕಪ್ಪಣ್ಣ ಗೀತಚಿತ್ರ ವಿಡಿಯೋ ಬಿಡುಗಡೆ ಮಾಡಲಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮಂಜುಶ್ರೀ ಎನ್., ಇಲಾಖೆಯ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ, ಆಡಳಿತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ವಿಶೇಷಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ಕನ್ನಡ ನಾಡಿನ ಕಲೆಗಳ ಕನ್ನಡಿ’ ಗೀತೆ ಬಿಡುಗಡೆ
ಸಮಾರಂಭದ ವಿಶೇಷ ಆಕರ್ಷಣೆಯಾಗಿ ಕನ್ನಡ ನಾಡಿನ ಕಲೆಗಳ ವೈವಿಧ್ಯ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ‘ಕನ್ನಡ ನಾಡಿನ ಕಲೆಗಳ ಕನ್ನಡಿ’ ಗೀತೆಯನ್ನು ಬಿಡುಗಡೆ ಮಾಡಲಾಗುತ್ತದೆ. 120ಕ್ಕೂ ಹೆಚ್ಚು ಹಿರಿಯ ಕಲಾವಿದರನ್ನು ಒಳಗೊಂಡ ಗೀತಚಿತ್ರ ವಿಡಿಯೋ ಕೂಡ ಇದೇ ಸಂದರ್ಭದಲ್ಲಿ ಅನಾವರಣಗೊಳ್ಳಲಿದೆ.
ಗೀತೆಗೆ ಪದ್ಮಭೂಷಣ ಶತಾವಧಾನಿ ಆರ್. ಗಣೇಶ್ ಸಾಹಿತ್ಯ ರಚಿಸಿದ್ದು, ಪ್ರವೀಣ್ ಡಿ. ರಾವ್ ಸಂಗೀತ ನೀಡಿದ್ದಾರೆ. ನಾಟ್ಯ ಸರಸ್ವತಿ ಶುಭ ಧನಂಜಯ ಅವರ ಪರಿಕಲ್ಪನೆಯಲ್ಲಿ ಗೀತಚಿತ್ರ ರೂಪುಗೊಂಡಿದೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭ ಧನಂಜಯ, ರಿಜಿಸ್ಟ್ರಾರ್ ರಶ್ಮಿ ಟಿ.ಎಸ್. ಹಾಗೂ ಅಕಾಡೆಮಿಯ ಸರ್ವ ಸದಸ್ಯರು ಕಲಾವಿದರು, ಕಲಾಭಿಮಾನಿಗಳು ಮತ್ತು ಸಾರ್ವಜನಿಕರನ್ನು ಸಮಾರಂಭಕ್ಕೆ ಆದರದಿಂದ ಆಹ್ವಾನಿಸಿದ್ದಾರೆ.
ಅಕಾಡೆಮಿ ಸದಸ್ಯರು: ಎಂ. ಖಾಸೀಮ್ ಮಲ್ಲಿಗೆಮಡುವು, ಬಿ.ವಿ. ಶ್ರೀನಿವಾಸ್, ರಮೇಶ್ ಗಣ್ಣೂರ್, ಸವಿತಾ ಅಮರೇಶ್ ನುಗಡೋಣಿ, ಪಿ. ಹರಿದಾಸ ಡೋಗ್ರಾ, ಬಸಪ್ಪ ಹೆಚ್. ಭಜಂತ್ರಿ, ಡಾ. ಗೀತಾ ಬಿ.ವಿ., ಉಷಾ ಬಸಪ್ಪ, ರಾಜು ಎಮ್ಮಿಗನೂರು, ನಿರ್ಮಲಾ ಡಿ.ಆರ್., ಶಂಕರಪ್ಪ ಬಿ. ಹೂಗಾರ, ಮೃತ್ಯುಂಜಯ ದೊಡ್ಡವಾಡ, ಬಿ. ಹುಸೇನ್ ಸಾಬ್ ಕನಕಗಿರಿ, ದೇವರಾಜು ಡಿ. (ಪದ ದೇವರಾಜು), ಡಾ. ವಸಂತಕಿರಣ್, ಡಾ. ಮದ್ದೇರಿ ಪಿ. ಮುನಿರೆಡ್ಡಿ ಹಾಗೂ ಡಿ.ಆರ್. ರಾಜಪ್ಪ.