Full site

ಕೆಪಿಎಸ್​ಸಿ ಕೇಸ್​ನ ಎಸ್ಐಟಿಯಲ್ಲಿದ್ದ ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ದಿಢೀರ್ ವರ್ಗಾವಣೆ

ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ಅವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ಆಗಿದ್ದ ಅವರು, ಕೆಪಿಎಸ್ಸಿ ಪ್ರಕರಣದ ವಿಶೇಷ ತನಿಖಾ ದಳದ ಸದಸ್ಯರಾಗಿದ್ದರು. ರಂಜಿತ್ ಕುಮಾರ್ ವರ್ಗಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.

2 min read

ಬೆಂಗಳೂರು, ಸೆಪ್ಟೆಂಬರ್​​ 23: ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಇತ್ತೀಚೆಗೆ ಹೈಕೋರ್ಟ್​​ ನೇಮಿಸಿದ್ದ ಡಿಜಿಪಿ ಅಲೋಕ್​​ ಕುಮಾರ್​ ನೇತೃತ್ವದ ವಿಶೇಷ ತನಿಖಾ ತಂಡದಲ್ಲಿ ಸದಸ್ಯರಾಗಿದ್ದ ಕುಶಲ್ ಚೌಕ್ಸಿ ಅವರನ್ನು ಸರ್ಕಾರ ದಿಢೀರ್​ ಚಿತ್ರದುರ್ಗ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರನ್ನಾಗಿ (ಎಸ್ಪಿ) ನೇಮಿಸಿ ಬುಧವಾರ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ವರ್ಗಾವಣೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ (ಎಸ್ಪಿ) ರಂಜಿತ್ ಕುಮಾರ್ ಅವರ ವರ್ಗಾವಣೆ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಇದೀಗ ಕುಶಲ್ ಚೌಕ್ಸಿ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರವು ಏಕಾಏಕಿ ಕುಶಲ್ ಚೌಕ್ಸಿ ಅವರನ್ನು ವರ್ಗಾವಣೆ ಮಾಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕೆಪಿಎಸ್​ಸಿ ನೇಮಕಾತಿ ಅಕ್ರಮ: ಎಸ್​ಐಟಿ ರಚನೆಯ ಹೈಕೋರ್ಟ್ ಆದೇಶಕ್ಕೆ ಸರ್ಕಾರ ಠಕ್ಕರ್, ಸುಪ್ರೀಂನಲ್ಲಿ ಪ್ರಶ್ನಿಸಲು ತೀರ್ಮಾನ ಕುಶಲ್ ಚೌಕ್ಸಿ ಅವರು ಈ ಹಿಂದೆ ಬೆಂಗಳೂರು ನಗರ ಆಡಳಿತ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರ ಜತೆಗೆ ಇತ್ತೀಚೆಗೆ ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ತನಿಖೆಗೆ ಡಿಜಿಪಿ ಅಲೋಕ್ ಕುಮಾರ್ ಅವರ ಸಾರಥ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಎಸ್‌ಐಟಿ ತಂಡಕ್ಕೆ ಹೈಕೋರ್ಟ್ ಸೆಪ್ಟೆಂಬರ್ 21 ರಂದು ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಆದರೆ, ನ್ಯಾಯಾಲಯದ ಮಹತ್ವದ ಆದೇಶ ಬೆನ್ನಲ್ಲೇ ಕೇವಲ 48 ಗಂಟೆಗಳಲ್ಲಿ ರಾಜ್ಯ ಸರ್ಕಾರ ಅವರನ್ನು ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರನ್ನಾಗಿ ನಿಯೋಜಿಸಿದೆ. ತಿಂಗಳಲ್ಲೇ ಎರಡೆರಡು ಸಲ ವರ್ಗಾವಣೆ ಕುಶಲ್ ಚೌಕ್ಸಿ ಅವರು ಈಗಾಗಲೇ ಒಂದೇ ತಿಂಗಳಲ್ಲಿ ಎರಡೆರಡು ಸಲ ವರ್ಗಾವಣೆಗೊಂಡಿದ್ದಾರೆ. ಆಗಸ್ಟ್ 29 ರಂದು ಕೈಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸರಣಿ ವರ್ಗಾವಣೆಯ ವೇಳೆ ಕುಶಾಲ್ ಚೌಕ್ಸಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಎಸ್ಪಿಯಾಗಿದ್ದ ಅವರನ್ನು ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗ ಮಾಡಲಾಗಿತ್ತು. ಇದನ್ನೂ ಓದಿ: ಕೆಪಿಎಸ್​​ಸಿ ಕರ್ಮಕಾಂಡದ ಮತ್ತಷ್ಟು ಸ್ಫೋಟಕ ಸಂಗತಿ ಬಯಲು: ಅಕ್ರಮದ ಹಣದಲ್ಲಿ ಗೆಳತಿಯೊಂದಿಗೆ ಮೋಜು ಮಸ್ತಿ ಇನ್ನು ಬೆಂಗಳೂರು ಡಿಸಿಪಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡು ಕೇವಲ ಒಂದು ತಿಂಗಳು ಕಳೆಯುವುದರೊಳಗೆ ಹಾಗೂ ನ್ಯಾಯಾಲಯ ಕೆಪಿಎಸ್‌ಸಿ ಹಗರಣದ ಮಹತ್ವದ ಜವಾಬ್ದಾರಿ ವಹಿಸಿದ ಬೆನ್ನಲ್ಲೇ, ಕುಶಾಲ್ ಚೌಕ್ಸಿ ಅವರನ್ನು ಸರ್ಕಾರ ಮತ್ತೆ ವರ್ಗಾವಣೆ ಮಾಡಿದೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source: TV9 Kannada

Read the full story on Anukshana