Full site
Art & Culture

ಯುವ ದಸರಾ ವೇದಿಕೆಯಲ್ಲಿ ‘ಸ್ಯಾಂಡಲ್‌ವುಡ್ ನೈಟ್ಸ್’

By Anukshana News Desk1 min readಮೈಸೂರು

ಮೈಸೂರು: ಮೈಸೂರು ದಸರಾ 2026ರ ಅಂಗವಾಗಿ ನಗರದ ಯುವ ದಸರಾ ವೇದಿಕೆಯಲ್ಲಿ ಇಂದು ಸಂಜೆ 4.30ಕ್ಕೆ ‘ಸ್ಯಾಂಡಲ್‌ವುಡ್ ನೈಟ್ಸ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡ ಚಿತ್ರರಂಗದ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಆಲೋಕ್ ಹಾಗೂ ಗಾಯಕಿ ಐಶ್ವರ್ಯ ರಂಗರಾಜನ್ ಸೇರಿದಂತೆ ಹಲವು ಪ್ರಸಿದ್ಧ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಂಗೀತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಇಂದು (ಅ.16) ಯುವ ದಸರಾ ವೇದಿಕೆಯಲ್ಲಿ ‘ಸ್ಯಾಂಡಲ್‌ವುಡ್ ನೈಟ್ಸ್’ ಕಾರ್ಯಕ್ರಮ ಮಾತ್ರ ನಡೆಯಲಿದ್ದು, ಯಾವುದೇ ಪೂರಕ (ಫಿಲ್ಲರ್) ಕಾರ್ಯಕ್ರಮಗಳು ಇರುವುದಿಲ್ಲ ಎಂದು ಯುವ ದಸರಾ ಉಪಸಮಿತಿ ಸ್ಪಷ್ಟಪಡಿಸಿದೆ.

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧೆಡೆ ಹರಿದಾಡುವ ಅನಧಿಕೃತ ಮಾಹಿತಿ ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡದೆ, ಜಿಲ್ಲಾಡಳಿತ ಮತ್ತು ಯುವ ದಸರಾ ಉಪಸಮಿತಿಯಿಂದ ಹೊರಡಿಸಲಾಗುವ ಅಧಿಕೃತ ಮಾಹಿತಿಯನ್ನೇ ಪರಿಗಣಿಸುವಂತೆ ಮನವಿ ಮಾಡಲಾಗಿದೆ.

ಮೈಸೂರು ಜಿಲ್ಲಾಡಳಿತದ ನೇತೃತ್ವದಲ್ಲಿ ಹಾಗೂ ಯುವ ದಸರಾ ಉಪಸಮಿತಿಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೈಸೂರಿನ ನಾಗರಿಕರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಉಪಸಮಿತಿ ಮನವಿ ಮಾಡಿದೆ.

Read the full story on Anukshana