Full site
Show

ವಿಜಯಪುರದಲ್ಲಿ ಸೆ.24ರಂದು ‘ಅವಳ ಹೆಜ್ಜೆ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕಿರುಚಿತ್ರ ಪ್ರದರ್ಶನ, ಯುವಜನರಿಗೆ ಕಾರ್ಯಾಗಾರ ಹಾಗೂ ಇಂಟರ್ನ್‌ಶಿಪ್ ಅವಕಾಶ

1 min read

ವಿಜಯಪುರ, ಸೆಪ್ಟೆಂಬರ್ 21: ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿರುವ ‘ಅವಳ ಹೆಜ್ಜೆ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರೋತ್ಸವದ ವಿಶೇಷ ಮರುಪ್ರದರ್ಶನ ಸೆಪ್ಟೆಂಬರ್ 24ರಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದೆ.

ಕಳೆದ ಮೇ ತಿಂಗಳಲ್ಲಿ ನಡೆದ ಮುಖ್ಯ ಕಿರುಚಿತ್ರೋತ್ಸವ ಹಾಗೂ ಜುಲೈನಲ್ಲಿ ಬೆಂಗಳೂರಿನ IIWCಯಲ್ಲಿ ನಡೆದ ಮರುಪ್ರದರ್ಶನದ ಬಳಿಕ, ಈ ಬಾರಿ ವಿಜಯಪುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಹಿಳೆಯರು ಕೇವಲ ಪರದೆ ಮೇಲಷ್ಟೇ ಅಲ್ಲದೆ, ಕ್ಯಾಮೆರಾ ಹಿಂದೆಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಮಹಿಳಾ ನಿರ್ದೇಶಕಿಯರ ಕಥನಗಳಿಗೆ ಸೂಕ್ತ ವೇದಿಕೆ ಸಿಗಬೇಕು ಎಂಬ ಉದ್ದೇಶದಿಂದ ‘ಅವಳ ಹೆಜ್ಜೆ’ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಗುಬ್ಬಿವಾಣಿ ಟ್ರಸ್ಟ್ ತಿಳಿಸಿದೆ.

ಕಾರ್ಯಕ್ರಮದಲ್ಲಿ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಪ್ರದರ್ಶನದ ಜೊತೆಗೆ ವಿದ್ಯಾರ್ಥಿಗಳು ಮತ್ತು ಯುವಜನರೊಂದಿಗೆ ಸಂವಾದ ನಡೆಯಲಿದೆ. ಅಲ್ಲದೆ, ಗುಬ್ಬಿವಾಣಿ ಟ್ರಸ್ಟ್ ವತಿಯಿಂದ ಇಂಟರ್ನ್‌ಶಿಪ್ ಅವಕಾಶಗಳನ್ನೂ ಒದಗಿಸಲಾಗುತ್ತಿದೆ.

ಇಂತಹ ಕಾರ್ಯಕ್ರಮಗಳನ್ನು ಸಹಯೋಗದಲ್ಲಿ ಆಯೋಜಿಸಲು ಆಸಕ್ತ ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಗುಬ್ಬಿವಾಣಿ ಟ್ರಸ್ಟ್ ಅನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮ ನಿರ್ದೇಶಕಿ ಶಾಂತಲಾ ದಾಮ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read the full story on Anukshana