- Home
- Short News

Anukshanaಶಾಲಾ ಪ್ರವೇಶ ದಿನಾಂಕ ಪ್ರಕಟ
ಸರ್ಕಾರಿ ಶಾಲೆಗಳ ಪ್ರವೇಶ ಪ್ರಕ್ರಿಯೆಗೆ ದಿನಾಂಕ ಪ್ರಕಟವಾಗಿದೆ. ಅರ್ಜಿ ಸಲ್ಲಿಸಲು ಮೂರು ವಾರ ಕಾಲಾವಕಾಶವಿದೆ. ೧ನೇ ತರಗತಿಗೆ ಪ್ರವೇಶ ಬಯಸುವ ಮಕ್ಕಳಿಗೆ ಜೂನ್ ೧ಕ್ಕೆ ೬ ವರ್ಷ ತುಂಬಿರಬೇಕು. ಜನನ ಪ್ರಮಾಣಪತ್ರ, ಆಧಾರ್ ಹಾಗೂ ವಿಳಾಸದ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಶಾಲೆಯಲ್ಲೇ ಅಥವಾ ಶಿಕ್ಷಣ ಇಲಾಖೆಯ ವೆಬ್ಸೈಟ್ ಮೂಲಕ ಸಲ್ಲಿಸಬಹುದು. ಸೀಟು ಹಂಚಿಕೆಯ ಪಟ್ಟಿ ಅರ್ಜಿ ಅವಧಿ ಮುಗಿದ ಒಂದು ವಾರದಲ್ಲಿ ಪ್ರಕಟವಾಗಲಿದೆ.






