- Home
- Short News

Anukshanaಬಿಎಂಟಿಸಿ ಹೊಸ ಮಾರ್ಗಗಳ ಘೋಷಣೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ೧೨ ಹೊಸ ಮಾರ್ಗಗಳನ್ನು ಘೋಷಿಸಿದೆ. ಹೊರವಲಯದ ಬಡಾವಣೆಗಳಿಂದ ನಗರ ಕೇಂದ್ರಕ್ಕೆ ನೇರ ಸಂಪರ್ಕ ದೊರೆಯಲಿದೆ. ಹೊಸ ಮಾರ್ಗಗಳಲ್ಲಿ ಬೆಳಗ್ಗೆ ೬ರಿಂದ ರಾತ್ರಿ ೧೦ರವರೆಗೆ ಪ್ರತಿ ೧೫ ನಿಮಿಷಕ್ಕೊಮ್ಮೆ ಬಸ್ಗಳು ಸಂಚರಿಸಲಿವೆ. ಇದಕ್ಕಾಗಿ ೮೦ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗುತ್ತಿದೆ. ಈ ಮಾರ್ಗಗಳು ಮೆಟ್ರೋ ನಿಲ್ದಾಣಗಳಿಗೂ ಸಂಪರ್ಕ ಕಲ್ಪಿಸುವುದರಿಂದ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಸೋಮವಾರದಿಂದ ಸೇವೆ ಆರಂಭವಾಗಲಿದೆ.






