By using this site, you agree to the Privacy Policy and Terms of Use.
Accept
anukshana.inanukshana.inanukshana.in
Notification Show More
Font ResizerAa
  • News
    • Karnataka
    • National
    • World
  • Bengaluru
  • Cinema
  • Budget 2026
  • Politics
  • Crime
  • epaper
  • Contact Us
Reading: ಕಥೋಲಿಕ ಕ್ರೈಸ್ತರ ಕನ್ನಡ ಸಂಘದಿಂದ ಧರಣಿ
Share
Font ResizerAa
anukshana.inanukshana.in
Search
  • Home
  • Bengaluru
    • GBA
    • BDA
    • Bengaluru City Police
    • Bengaluru Traffic Police
    • #SwachhSurvekshan2026
    • Census 2026
  • News
    • Karnataka
    • National
    • World
  • Districts
  • Cinema
  • Crime
  • Health
  • Politics
  • Sitemap
  • epaper
  • Contact Us
Have an existing account? Sign In
Follow US

ಕಥೋಲಿಕ ಕ್ರೈಸ್ತರ ಕನ್ನಡ ಸಂಘದಿಂದ ಧರಣಿ

Anukshana Media
Last updated: March 28, 2026 11:49 pm
Anukshana Media
Published: March 28, 2026

ಚರ್ಚ್ ಗಳಲ್ಲಿ ಧರ್ಮಾಧ್ಯಕ್ಷರಾಗಲು ಕನ್ನಡ ಕಲಿತು ಬರಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು: ಇತರೇ ರಾಜ್ಯಗಳಿಂದ ಕರ್ನಾಟಕದ ಚರ್ಚ್ಗಳಲ್ಲಿ ಧರ್ಮಾಧ್ಯಕ್ಷರಾಗಲು ಬರುವವರು ಕಡ್ಡಾಯವಾಗಿ ಕನಿಷ್ಠ ಆರು ತಿಂಗಳು ವ್ಯವಹಾರಿಕ ಕನ್ನಡವನ್ನು ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನಕ್ಕೆ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ ಡಾ.ಎಲ್.ಹನುಮಂತಯ್ಯ ತಿಳಿಸಿದ್ದಾರೆ.

ಶನಿವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರು ಮತ್ತು ಭಕ್ತರ ನಡುವಿನ ಭಾಷೆಯಲ್ಲಿ ಕಂದಕ ಇರಬಾರದು. ಪ್ರಪಂಚದಲ್ಲಿ ಲಭ್ಯವಿರುವ ಎಲ್ಲ ಧರ್ಮಗಳಿಗೂ ಇರಬೇಕಾದಂತ ಸಾಮಾನ್ಯ ಕಾನೂನುನೆಂದರೆ ದೇವರು ಮತ್ತು ಭಕ್ತರ ನಡುವಿನ ಸಂವಾದ ಅವರಿಬ್ಬರಿಗೂ ತಿಳಿದಿರುವ ಭಾಷೆಯಲ್ಲಿ ನಡೆಯಬೇಕು. ಇದು ಸರಳವಾದ ಸತ್ಯ ಎಂದರು.

ನಾವು ವ್ಯಾಟಿಕನ್ ನಗರದಲ್ಲಿ ಕನ್ನಡದವರನ್ನು ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ಕೇಳುತ್ತಿಲ್ಲ. ಬೆಂಗಳೂರು ಮತ್ತು ರಾಜ್ಯಾದ್ಯಂತ ಇರುವ ಚರ್ಚ್ಗಳಲ್ಲಿ ಕನ್ನಡದವರನ್ನು ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ಕೇಳುತ್ತಿದ್ದೇವೆ. ಇದಕ್ಕೆ ಸುಪ್ರೀಂಕೋರ್ಟ್ ಕೂಡ ವಿರೋಧಿಸಲು ಸಾಧ್ಯವಿಲ್ಲ. ಕನ್ನಡಕ್ಕೆ ಕ್ರೈಸ್ತರ ಕೊಡುಗೆ ದೊಡ್ಡದು. ರೆವರೆಂಡ್ ಕಿಟ್ಟಲ್ ಅವರು ಕನ್ನಡಕ್ಕೆ ದೊಡ್ಡ ನಿಘಂಟನ್ನು ಕೊಟ್ಟವರು ಎಂದು ಹನುಮಂತಯ್ಯ ಸ್ಮರಿಸಿದರು.

ಕ್ರೈಸ್ತರು ತಮ್ಮ ಮಿಷನರಿಗಳ ಮೂಲಕ ಅಂಚಿನಲ್ಲಿರುವ ಜನರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಿದ್ದಾರೆ ಮತ್ತು ಸ್ಥಳೀಯ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕೆನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇದು ಯಾಕೆ ಈಗಿನ ಧರ್ಮದ ಅತ್ಯುನ್ನತ ಸ್ಥಾನದಲ್ಲಿರುವ ಧರ್ಮಾಧ್ಯಕ್ಷರಿಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇದರಿಂದ ನಿಮಗಾಗುವ ಸಮಸ್ಯೆ ಏನು? ಕನ್ನಡ ಭಾಷೆಯಲ್ಲಿ ತೊಡಕುಗಳಿದ್ದರೆ ನಿವಾರಿಸುವ ಕೆಲಸ ಮಾಡೋಣ. ಅದಕ್ಕೆ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಅನೇಕ ಸಂಸ್ಥೆಗಳು, ಸರಕಾರಿ ಇಲಾಖೆಗಳು ತಯಾರಾಗಿವೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಅನ್ಯ ಭಾಷಿಗರು ಕನ್ನಡ ಜಾಗವನ್ನು ಆಕ್ರಮಿಸಿಕೊಳ್ಳಲು ಪ್ರಯತ್ತಿಸುತ್ತಿದ್ದಾರೆ. ಹಿಂದಿ ವಲಸಿಗರು ಅತಿಹೆಚ್ಚು ಕೆಲಸಕ್ಕಾಗಿ, ಅನ್ನಕ್ಕಾಗಿ ನಗರಕ್ಕೆ ಬರುತ್ತಿದ್ದಾರೆ. ಇಲ್ಲಿಗೆ ಬಂದಿರುವ ಹಲವರು ಕನ್ನಡವನ್ನು ಕಲಿತು ಮಾತನಾಡುವವರು ಇದ್ದಾರೆ. ಆದರೆ ಇನ್ನು ಕೆಲವರು ಕನ್ನಡವನ್ನು ಕಲಿಯದೇ ಹಿಂದಿಯಲ್ಲಿಯೇ ವ್ಯವಹರಿಸುತ್ತಿದ್ದಾರೆ. ಹಿಂದಿ ಹೇರಿಕೆಯನ್ನು ಪ್ರಭುತ್ವವು ಮಾಡುತ್ತಿದೆ, ಬೇರೆ ರಾಜ್ಯಗಳು ಮಾಡುತ್ತಿವೆ. ಈ ಹಿಂದಿ ಏರಿಕೆಯನ್ನು ತೀವ್ರವಾಗಿ ವಿರೋಧಿಸಬೇಕು ಎಂದು ಹನುಮಂತಯ್ಯ ಕರೆ ನೀಡಿದರು.

ಸಂಘದ ಅಧ್ಯಕ್ಷ ಎ.ಐಸಾಕ್ ಮಾತನಾಡಿ, ದ್ವಿತೀಯ ವಾಟಿಕನ್ ಕೌನ್ಸಿಲ್ ನೀಡಿದ ಮಾರ್ಗದರ್ಶನದ ಪ್ರಕಾರ ಕರ್ನಾಟಕ ಚರ್ಚ್ಗಳಲ್ಲಿ ಕನ್ನಡವನ್ನು ಸಾಮಾನ್ಯ ವರ್ಣಾಕ್ಯುಲರ್ ಪ್ರಾಂತೀಯ ಭಾಷೆಯಾಗಿ ಪರಿಗಣಿಸಿ, ನಿಯಮಿತವಾಗಿ ಕನ್ನಡ ಪೂಜೆಗಳನನ್ನು ನಡೆಸಬೇಕು. ಪ್ರಾದೇಶಿಕ ಗುರುಮಠ ಸ್ಥಾಪನೆ, ಸಂತ ಪೇತ್ರರ ಗುರುಮಂದಿರದ ಸಂಪೂರ್ಣ ಆಡಳಿತ ಕರ್ನಾಟಕ ಧರ್ಮಾಧ್ಯಕ್ಷರುಗಳಿಗೇ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಡಾ.ರಾಜ್ ಕುಮಾರ್ ಆಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಸಾಹಿತಿಗಳಾದ ಡಾ.ಮನು ಬಳಿಗಾರ್, ಡಾ.ರೀಟಾ, ಕನ್ನಡಪರ ಹೋರಾಟಗಾರರಾದ ರಾ.ನಂ.ಚಂದ್ರಶೇಖರ್, ಡಾ.ಆರ್.ಎ.ಪ್ರಸಾಧ್, ವ.ಚ.ಚನ್ನೇಗೌಡ, ಪದ್ಮಿನಿ ನಾಗರಾಜ್, ಸಂಘದ ಪದಾಧಿಕಾರಿಗಳಾದ ಅಂತೋಣಿ ರಾಜ್, ಜಾನ್ ಬ್ರಿಟ್ಟೋ, ಬರ್ತಲೋಮಿಯೋ, ಜಾರ್ಜ್ ಕುಮಾರ್, ದೇವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ: 2024ನೇ ವಾರ್ಷಿಕ ಪ್ರಶಸ್ತಿ ವಿಜೇತರ ಘೋಷಣೆ
₹3052 ಕೋಟಿ ಯೋಜನೆಗಳಿಗೆ ಕೇಂದ್ರ ಅನುಮೋದನೆಗೆ ಮನವಿ: ಸಕಾರಾತ್ಮಕ ಸ್ಪಂದನೆ — ಎನ್‌.ಎಸ್‌. ಭೋಸರಾಜು
ಅಂಕಿಅಂಶಗಳಿಲ್ಲದೆ ಒಳಮೀಸಲಾತಿ ಜಾರಿ: ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ವಿರೋಧ
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ ಸಮಸ್ಯೆ ಇಲ್ಲ – ಕಮರ್ಷಿಯಲ್ ಸಿಲಿಂಡರ್‌ನಲ್ಲಿ ಮಾತ್ರ ಸ್ವಲ್ಪ ತೊಂದರೆ
2026ರ ವಿ.ಪಿ.ಸಿಂಗ್ ಹಾಗೂ ಕರ್ಪೂರಿ ಠಾಕೂರ್ ಪ್ರಶಸ್ತಿ ಪುರಸ್ಕೃತರ ಘೋಷಣೆ
Share This Article
Facebook
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Crime

ವಿಶಾಖ ಉಕ್ಕು ಕಾರ್ಖಾನೆ ದುರಂತ: ಕಾರ್ಮಿಕರ ಸಾವಿನ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ

Anukshana Media
Anukshana Media
June 9, 2026
ಇದು ಪ್ರಕಟಣೆಗೆ ಸೂಕ್ತವಾಗುವಂತೆ ಮರುರಚಿಸಲಾದ ಸುದ್ದಿ:
ಮತದಾರರ ಪಟ್ಟಿ ಪರಿಷ್ಕರಣೆಗೆ ಜೂನ್ 30ರಿಂದ ಮನೆ-ಮನೆ ಸಮೀಕ್ಷೆ
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಸಂತೋಷ್ ಲಾಡ್‌ಗೆ ಡಿಸಿಎಂ, ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಸಕಲ ಮರಾಠ ಸಮಾಜ ಆಗ್ರಹ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Bengaluru

About US

Anukshana Kannada News is a Bengaluru-based digital news platform covering metro city updates with speed and accuracy. We proudly reach over 1 million readers, keeping the city informed every day.

Subscribe US

Subscribe to our newsletter to get our newest articles instantly!

© Foxiz News Network. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?