ಮೇ 29ರಿಂದ 31ರವರೆಗೆ ಬೆಂಗಳೂರಿನಲ್ಲಿ ಉದ್ಯಮ, ಸ್ಟಾರ್ಟ್‌ಅಪ್ ಹಾಗೂ ರಫ್ತು ವಲಯದ ಮಹಾಸಂಗಮ
ಬೆಂಗಳೂರು ಮೇ 26: ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ನವೀನ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ “ಗ್ಲೋಬಲ್ ಎಂಎಸ್‌ಎಂಇ ಕಾನ್ಕ್ಲೇವ್ 2026” ಆಯೋಜಿಸಲಾಗುತ್ತಿದೆ ಎಂದು ಎಫ್‌ಕೆಸಿಸಿಐನ ಅಧ್ಯಕ್ಷರಾದ ತಿಳಿಸಿದ್ದಾರೆ.
ಎಫ್‌ಕೆಸಿಸಿಐ (Federation of Karnataka Chambers of Commerce and Industry – FKCCI) ವತಿಯಿಂದ ಆಯೋಜಿಸಲಾಗುತ್ತಿರುವ ಈ ಕಾನ್ಕ್ಲೇವ್ ಮೇ 29ರಿಂದ 31ರವರೆಗೆ ಬೆಂಗಳೂರಿನ ತ್ರಿಪುರ ವಾಸಿಸಿ ಪ್ಯಾಲೆಸ್ ಗ್ರೌಂಡ್ಸ್ (Tripuravasini Palace Grounds) ನಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, “ಗ್ಲೋಬಲ್ ಎಂಎಸ್‌ಎಂಇ ಕಾನ್ಕ್ಲೇವ್ ದೇಶದ ಉದ್ಯಮಿಗಳು, ಸ್ಟಾರ್ಟ್‌ಅಪ್ ಸಂಸ್ಥೆಗಳು, ತಯಾರಿಕಾ ವಲಯ, ರಫ್ತುಗಾರರು ಹಾಗೂ ಹೂಡಿಕೆದಾರರಿಗೆ ಅತ್ಯುತ್ತಮ ವೇದಿಕೆಯಾಗಲಿದೆ. ಉದ್ಯಮ ವಿಸ್ತರಣೆ, ಹೊಸ ತಂತ್ರಜ್ಞಾನ ಪರಿಚಯ, ರಫ್ತು ಅವಕಾಶಗಳು ಹಾಗೂ ನೆಟ್‌ವರ್ಕಿಂಗ್‌ಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ” ಎಂದರು.

ಕಾನ್ಕ್ಲೇವ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಕೈಗಾರಿಕಾ ತಜ್ಞರು, ಉದ್ಯಮಿಗಳು ಹಾಗೂ ಹೂಡಿಕೆದಾರರು ಭಾಗವಹಿಸಲಿದ್ದು, ಎಂಎಸ್‌ಎಂಇ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದ ವಿವಿಧ ಚರ್ಚೆಗಳು ಹಾಗೂ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ದಿನದಂದು ಅನಗತ್ಯ ಸಾಲುಗಳನ್ನು ತಪ್ಪಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದೆ ಎಂದು ಹೇಳಿದರು.
ಸ್ಟಾಲ್ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಮೇಶ್ ಎಸ್ ಮಡಿವಾಳ (94490 61810) ಹಾಗೂ ರಿತಿಕ್ ನಾಯಕ್ (91132 50621) ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ:
Global MSME Conclave 2026 Registration




