- Home
- Short News

Anukshanaಮೆಟ್ರೋ ಹಸಿರು ಮಾರ್ಗದ ಸಮಯ ಬದಲಾವಣೆ
ಹಸಿರು ಮಾರ್ಗದಲ್ಲಿ ಬೆಳಗ್ಗೆ ೫ ಗಂಟೆಯಿಂದ ರೈಲು ಸೇವೆ ಆರಂಭವಾಗಲಿದೆ. ಉದ್ಯೋಗಿಗಳ ಬೇಡಿಕೆಯ ಮೇರೆಗೆ ಈ ನಿರ್ಧಾರ. ಇದುವರೆಗೆ ಬೆಳಗ್ಗೆ ೬ ಗಂಟೆಗೆ ಮೊದಲ ರೈಲು ಹೊರಡುತ್ತಿತ್ತು. ಮುಂಜಾನೆ ಪಾಳಿಯ ಉದ್ಯೋಗಿಗಳು, ಮಾರುಕಟ್ಟೆಗೆ ತೆರಳುವ ವ್ಯಾಪಾರಿಗಳು ಹಾಗೂ ರೈಲು ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಬೆಳಗ್ಗೆ ೫ರಿಂದ ೬ ಗಂಟೆಯವರೆಗೆ ಪ್ರತಿ ೧೫ ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದ್ದು, ದಟ್ಟಣೆಯ ಅವಧಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೆಟ್ರೋ ನಿಗಮ ತಿಳಿಸಿದೆ.






