- Home
- Karnataka
- Chikkaballapur
- Day Special
ಮಾರಣಾಂತಿಕ ರೇಬೀಸ್ಗೆ ತಡೆಗೋಡೆ ಲಸಿಕೆ: 60 ಸಾಕುಪ್ರಾಣಿಗಳಿಗೆ ಜೀವ ರಕ್ಷಕ ಲಸಿಕೆ
ರೇಬೀಸ್ ಎಂಬ ಮಾರಣಾಂತಿಕ ವೈರಸ್ನಿಂದ ಪ್ರಾಣಿಗಳು ಹಾಗೂ ಮನುಷ್ಯರನ್ನು ರಕ್ಷಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಜಾಗೃತಿ ಅಭಿಯಾನ ಮತ್ತು ಉಚಿತ ಆ್ಯಂಟಿ ರೇಬೀಸ್ ಲಸಿಕಾ ಶಿಬಿರ ಆಯೋಜಿಸಲಾಗಿದ್ದು, 60ಕ್ಕೂ ಹೆಚ್ಚು ನಾಯಿಗಳು ಮತ್ತು ಬೆಕ್ಕುಗಳಿಗೆ ಲಸಿಕೆ ನೀಡಲಾಯಿತು.
1min read
ಚಿಕ್ಕಬಳ್ಳಾಪುರ: ಮಾರಣಾಂತಿಕ ರೇಬೀಸ್ ರೋಗದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ರೇಬೀಸ್ ದಿನದ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಮರಳಿ ಪಶುವೈದ್ಯಕೀಯ ಚಿಕಿತ್ಸಾಲಯದಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆ್ಯಂಟಿ ರೇಬೀಸ್ ಲಸಿಕಾ ಶಿಬಿರ ಆಯೋಜಿಸಲಾಯಿತು.
ರೇಬೀಸ್ ವೈರಸ್ನಿಂದ ಉಂಟಾಗುವ ಈ ರೋಗವು ಮನುಷ್ಯರು ಹಾಗೂ ಪ್ರಾಣಿಗಳಿಗೂ ಅಪಾಯಕಾರಿಯಾಗಿದ್ದು, ಸೋಂಕು ಕಾಣಿಸಿಕೊಂಡ ಬಳಿಕ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕೆ ಹಾಗೂ ಸಮಯಕ್ಕೆ ಸರಿಯಾದ ಲಸಿಕೆ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ವೈದ್ಯರು ತಿಳಿಸಿದರು.
ಭಾರತೀಯ ಪಶುವೈದ್ಯಕೀಯ ಸಂಸ್ಥೆ (IAH&VB) ವಿಜ್ಞಾನಿಗಳು ಹಾಗೂ ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ವೈದ್ಯರ ತಂಡ ಈ ಶಿಬಿರವನ್ನು ಆಯೋಜಿಸಿತು. ಕಾರ್ಯಕ್ರಮವನ್ನು ಡಾ. ಜ್ಞಾನೇಶ್ (ಸಹಾಯಕ ನಿರ್ದೇಶಕರು), ಡಾ. ಅಮಿತಾ ಗೋಮ್ಸ್, ಡಾ. ಯಶವಂತ್ ಎಸ್.ಎಲ್. ಹಾಗೂ ಡಾ. ಪ್ರದೀಪ್ ಉದ್ಘಾಟಿಸಿದರು.
ಶಿಬಿರದಲ್ಲಿ ಸುಮಾರು 60 ನಾಯಿಗಳು ಮತ್ತು ಬೆಕ್ಕುಗಳಿಗೆ ಉಚಿತ ಆ್ಯಂಟಿ ರೇಬೀಸ್ ಲಸಿಕೆ ನೀಡಲಾಗಿದ್ದು, ಜಂತು ನಿವಾರಣಾ ಚಿಕಿತ್ಸೆಯನ್ನೂ ಕೈಗೊಳ್ಳಲಾಯಿತು. ಸಾಕುಪ್ರಾಣಿಗಳ ಮಾಲೀಕರಿಗೆ ರೇಬೀಸ್ ಹರಡುವ ವಿಧಾನ, ರೋಗದ ಲಕ್ಷಣಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿಪಶುವೈದ್ಯಕೀಯ ಸಂಸ್ಥೆಯ ಡಾ. ಸುಮತಿ, ಡಾ. ಚಂದ್ರಶೇಖರ್, ಡಾ. ಕವಿತಾ, ಡಾ. ರಶ್ಮಿ ಹಾಗೂ ಪಶುಸಂಗೋಪನಾ ಇಲಾಖೆಯ ಡಾ. ಉಮಾ (CVO), ಡಾ. ಪ್ರದೀಪ್ ಮತ್ತು ಡಾ. ದೇವರಾಜ್ ಸೇರಿದಂತೆ ಹಲವು ವೈದ್ಯರು ಭಾಗವಹಿಸಿದ್ದರು.
ಸಾಕುಪ್ರಾಣಿಗಳಿಗೆ ನಿಯಮಿತ ಲಸಿಕೆ ನೀಡುವುದು ರೇಬೀಸ್ ನಿಯಂತ್ರಣದ ಪ್ರಮುಖ ಹೆಜ್ಜೆಯಾಗಿದ್ದು, ಪ್ರಾಣಿಗಳ ಆರೋಗ್ಯದ ಜೊತೆಗೆ ಮಾನವ ಜೀವ ರಕ್ಷಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳಿದರು.
No ratings yet







