By using this site, you agree to the Privacy Policy and Terms of Use.
Accept
anukshana.inanukshana.inanukshana.in
Notification Show More
Font ResizerAa
  • News
    • Karnataka
    • National
    • World
  • Bengaluru
  • Cinema
  • Budget 2026
  • Politics
  • Crime
  • epaper
  • Contact Us
Reading: ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಿನ ಭೀತಿ: ಶ್ರೀರಾಮುಲು
Share
Font ResizerAa
anukshana.inanukshana.in
Search
  • Home
  • Bengaluru
    • GBA
    • BDA
    • Bengaluru City Police
    • Bengaluru Traffic Police
    • #SwachhSurvekshan2026
    • Census 2026
  • News
    • Karnataka
    • National
    • World
  • Districts
  • Cinema
  • Crime
  • Health
  • Politics
  • Sitemap
  • epaper
  • Contact Us
Have an existing account? Sign In
Follow US

ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಿನ ಭೀತಿ: ಶ್ರೀರಾಮುಲು

Anukshana Media
Last updated: April 2, 2026 3:08 pm
Anukshana Media
Published: April 2, 2026

ದಾವಣಗೆರೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಿನ ಭೀತಿ ಮತ್ತು ಭಯ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರ ಹುಟ್ಟಿದ್ದೇ ಸುಳ್ಳಿನಿಂದ. ಅದಕ್ಕೆ ಈಗಲೂ ಅವರು ಸುಳ್ಳು ಹೇಳುತ್ತಿದ್ದಾರೆ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಗೆದ್ದರೆ ಗ್ಯಾರಂಟಿಗಳನ್ನು ಬಂದ್ ಮಾಡುತ್ತೇವೆ ಎಂದು ಸಿಎಂ ಹೇಳುತ್ತಾರೆ. ಕರ್ನಾಟಕದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಸರ್ಕಾರವಲ್ಲ. ಆದ್ದರಿಂದ ಗ್ಯಾರಂಟಿ ನಿಲ್ಲಿಸುವುದಿದ್ದರೆ ಅವರೇ ನಿಲ್ಲಿಸಬೇಕು ಎಂದರು.
ಕಾಂಗ್ರೆಸ್‍ನವರು ಮೊದಲಿನಿಂದಲೂ ಜನರು ದಡ್ಡರು ಅಂತ ತಿಳಿದಿದ್ದಾರೆ. ಆದರೆ ಈಗ ಎರಡೂ ಕಡೆ ಸೋಲುತ್ತಿದ್ದೇವೆ ಎಂಬ ಮನವರಿಕೆ ಅವರಿಗೆ ಅಗಿದೆ. ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಲ್ಲ ಅವರ ಪರವಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಕಾಂಗ್ರೆಸ್‍ಗೆ ಸೋಲಿನ ಭೀತಿ ಪ್ರಾರಂಭವಾಗಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಡಿ ಕೆ ಶಿವಕುಮಾರ್ ಅವರನ್ನು ಕಂಡರೂ ಭಯ ಆರಂಭವಾಗಿದೆ. ಈ ಉಪ ಚುನಾವಣೆ ಬಂದ ನಂತರ ಬಿಜೆಪಿ ಕಂಡರೂ ಭಯವಾಗುತ್ತಿದೆ ಎಂದು ನುಡಿದರು.
2018 ರಲ್ಲಿ ಚುನಾವಣೆ ನಡೆದಾಗ ದಲಿತ ನಾಯಕ ಡಾ. ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗಿತ್ತು. ಆಗ ಸಿದ್ದರಾಮಯ್ಯ ಪರಮೇಶ್ವರ್ ಅವರನ್ನು ಸೋಲಿಸಿದರು. ಈಗ ಕಾಲ ಬದಲಾಗಿದೆ. ಅಹಿಂದ ಹೆಸರು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅಧಿಕಾರ ಹಂಚಿಕೆ ಮಾಡುವಾಗ ಅಹಿಂದ ಇಲ್ಲ. ಬೇಕಾದವರಿಗೆ ಮಾತ್ರ ಅಧಿಕಾರ ಕೊಟ್ಟರು ಎಂದರು.
ಬಿಜೆಪಿಯನ್ನು ಕಳ್ಳ ಎತ್ತುಗಳಿಗೆ ಸಿದ್ದರಾಮಯ್ಯ ಅವರು ಹೋಲಿಸಿದ್ದಾರೆ. ಗೋಮಾತೆಗೆ ಹೋಲಿಸಿದ್ದಕ್ಕೆ ಧನ್ಯವಾದಗಳು. ದನಕರುಗಳು ಮೇವು ಸಿಕ್ಕರೆ ಎಷ್ಟು ಬೇಕೋ ಅಷ್ಟನ್ನೇ ತಿಂದು ಮನೆಗೆ ಹೋಗುತ್ತವೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರದ ಮಂತ್ರಿಗಳು ಈ ರಾಜ್ಯದ ಖಜಾನೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಐದರಿಂದ ಹತ್ತು ತಲೆಮಾರಿಗೆ ಸಾಕಾಗುವಷ್ಟು ಹಣ ಮಾಡಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟ ನಿಗಮ ಹೀಗೆ ಎಲ್ಲೆಡೆ ಭ್ರμÁ್ಟಚಾರ ಮಾಡಿದರು. ಹೀಗೆ ಲೂಟಿ ಮಾಡಿದ ಹಣವನ್ನು ಬೇರೆ ಬೇರೆ ರಾಜ್ಯದ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಬಳಸಿದರು ಎಂದು ವಿವರಿಸಿದರು.
ಬಿಜೆಪಿಯವರು ಎತ್ತುಗಳಾದರೆ ಕಾಂಗ್ರೆಸ್‍ನವರು ಹೆಗ್ಗಣಗಳಂತೆ. ಸಿದ್ದರಾಮಯ್ಯ ಮತ್ತು ಅವರ ಸುತ್ತಲೇ ಈ ಹೆಗ್ಗಣಗಳಿವೆ. ಇವರು ಈಗ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಿಗೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೈಯುವುದು ಬಿಟ್ಟು ಬೇರೇನೂ ಗೊತ್ತಿಲ್ಲ. ಯಾವುದೇ ಹೊಸ ವಿಚಾರ ಇಲ್ಲ. ಆದರೆ ಇವರ ಸರ್ಕಾರ ಏನೂ ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಐಸಿಯು ಸ್ಥಿತಿಯಲ್ಲಿದೆ. ಸುಳ್ಳಿನ ವೆಂಟಿಲೇಟರ್ ಮೇಲೆ ಸರ್ಕಾರ ಇದೆ. ಆ ವೆಂಟಿಲೇಟರ್ ತೆಗೆದರೆ ಸರ್ಕಾರದ ಕಥೆ ಮುಗಿದಂತೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಗೆ, ಜಿಎಸ್‍ಟಿ ಸಭೆಗಳಿಗೆ ಚಕ್ಕರ್ ಹಾಕಿದ್ದಾರೆ. ಮಧ್ಯ ಏμÁ್ಯದಲ್ಲಿ ಯುದ್ಧ ನಡೆಯುತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ಸಭೆ ಕರೆದರೂ ಇವರು ಹೋಗುವುದಿಲ್ಲ. ಇಂತಹವರಿಗೆ ಮೋದಿ ಅವರನ್ನು ಬೈಯುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಗೆಲ್ಲುತ್ತಾರೆ ಎಂಬ ಎಲ್ಲಾ ವಿಶ್ವಾಸ ಇದೆ. ಈ ಬಾರಿ ಎಲ್ಲರೂ ಬಿಜೆಪಿಗೆ ಮತ ನೀಡಲು ಸಂಕಲ್ಪ ಮಾಡಿದ್ದಾರೆ. ಎಲ್ಲಾ ನಾಯಕರು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಎಲ್ಲರ ತಲೆಮೇಲೆ, ಹೋಗಲಿ ಹುಟ್ಟುವ ಮಕ್ಕಳ ತಲೆ ಮೇಲೂ ಒಂದೂವರೆ ಲಕ್ಷ ಸಾಲ ಮಾಡಿದ್ದಾರೆ. ಎಲ್ಲ ಸಿಎಂ ಗಳು ಸಾಲ ಮಾಡಿದ್ದರೂ. ಆದರೆ ಇವರಷ್ಟು ಯಾರೂ ಸಾಲ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜನರೇ ನಾಯಕರು: ಉಪೇಂದ್ರನ ಹೊಸ ರಾಜಕೀಯ ಪ್ರಯೋಗ; ‘ಪ್ರಜಾಕೀಯ’ ಆಪ್‌ ಬಿಡುಗಡೆ
ಅನ್ಯಾಯ ಮುಂದುವರಿದರೆ ಚುನಾವಣೆಯಲ್ಲಿ ಉತ್ತರ: ಕಾಂಗ್ರೆಸ್‌ಗೆ ಮುಸ್ಲಿಂ ನಾಯಕರ ಎಚ್ಚರಿಕೆ
ಸಿದ್ದರಾಮಯ್ಯ ಪಾಪರ್‌ ಸಿಎಂ, ಸರ್ಕಾರ ದಿವಾಳಿಯಾಗಿದ್ದರೂ ಶಾಸಕರ ಫಾರಿನ್‌ ಟೂರ್‌
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ: ಬಸವರಾಜ ಬೊಮ್ಮಾಯಿ
TAGGED:Sriramulu
Share This Article
Facebook
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Crime

ವಿಶಾಖ ಉಕ್ಕು ಕಾರ್ಖಾನೆ ದುರಂತ: ಕಾರ್ಮಿಕರ ಸಾವಿನ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ

Anukshana Media
Anukshana Media
June 9, 2026
ಇದು ಪ್ರಕಟಣೆಗೆ ಸೂಕ್ತವಾಗುವಂತೆ ಮರುರಚಿಸಲಾದ ಸುದ್ದಿ:
ಮತದಾರರ ಪಟ್ಟಿ ಪರಿಷ್ಕರಣೆಗೆ ಜೂನ್ 30ರಿಂದ ಮನೆ-ಮನೆ ಸಮೀಕ್ಷೆ
ಸಂತೋಷ್ ಲಾಡ್‌ಗೆ ಡಿಸಿಎಂ, ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಸಕಲ ಮರಾಠ ಸಮಾಜ ಆಗ್ರಹ
ಅಂಚೆ ಮೂಲಕ ಮನೆ ಬಾಗಿಲಿಗೇ ಮಾವು: ‘ರೈತರ ಅಂಚೆ’ ಆನ್‌ಲೈನ್ ಸೇವೆಗೆ ಚಾಲನೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Bengaluru

About US

Anukshana Kannada News is a Bengaluru-based digital news platform covering metro city updates with speed and accuracy. We proudly reach over 1 million readers, keeping the city informed every day.

Subscribe US

Subscribe to our newsletter to get our newest articles instantly!

© Foxiz News Network. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?