ಬೆಂಗಳೂರು: ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ನೇತೃತ್ವದ ಸಂಘಗಳು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ, 36 ಸಾವಿರಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯುವುದಾಗಿ ಘೋಷಿಸಿವೆ.
ಖಾಲಿ ಹುದ್ದೆಗಳ ಭರ್ತಿ ಮಾಡದಿರುವುದು, 13 ವರ್ಷಗಳಿಂದ ಜೇಷ್ಠತಾ ಪಟ್ಟಿ ಪ್ರಕಟಿಸದಿರುವುದು, ಮುಂಬಡ್ತಿ ತಡೆ, ಉನ್ನತ ವ್ಯಾಸಂಗದ ಅವಕಾಶ ಸ್ಥಗಿತ, ಗುತ್ತಿಗೆ ವೈದ್ಯರ ಖಾಯಂ ಪ್ರಕ್ರಿಯೆ ನಿಲ್ಲಿಕೆ, ಏಕಪಕ್ಷೀಯ ಆದೇಶಗಳು ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಮೂಲಕ ಔಷಧಿ ಪೂರೈಕೆಯಲ್ಲಿ ವೈಫಲ್ಯದಿಂದ ಆರೋಗ್ಯ ಸೇವೆ ಕುಸಿತದ ಅಂಚಿಗೆ ತಲುಪಿದೆ ಎಂದು ಸಂಘಗಳು ಆರೋಪಿಸಿವೆ. 10-03-2026ರೊಳಗೆ ಬೇಡಿಕೆ ಈಡೇರಿಸದಿದ್ದರೆ 11ರಿಂದ 15ರವರೆಗೆ ಹೊರರೋಗಿ ಸೇವೆ ಸ್ಥಗಿತಗೊಳಿಸಿ ತುರ್ತು ಸೇವೆ ಮಾತ್ರ ನೀಡಲಾಗುವುದು, ನಂತರ ಸಂಪೂರ್ಣ ಕರ್ತವ್ಯ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಕೊನೆಯ ಗಡುವು: ಮಾ.10 ಬಳಿಕ ಹೋರಾಟ
Share This Article
Leave a Comment




