ಬೆಂಗಳೂರು: ನಗರದ ಪದ್ಮನಾಭನಗರದ ವಾಜಪೇಯಿ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಶ್ರೀ ಲಕ್ಷ್ಮಿಭೂ ವರಾಹ ಮಹಾಯಾಗ ಭವ್ಯ ಯಶಸ್ಸು ಕಂಡಿತು. ಇಂಡಸ್ ಟಿಎಂಟಿ 555-ಡಿಟಿಎಂಟಿ ಮತ್ತು ಆಯುಷ್ ಫೌಂಡೇಶನ್ ಸಹಯೋಗದಲ್ಲಿ ಹಾಗೂ ಯುನೋಸೇಫ್ ಎಲಿವೇಟರ್ ಸಂಸ್ಥೆಯ ಸಹಕಾರದೊಂದಿಗೆ ನಡೆದ ಈ ಮಹಾಯಾಗಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು, ಮನೆ ನಿರ್ಮಾಣಕಾರರು ಮತ್ತು ಇಂಜಿನಿಯರ್‌ಗಳು ಭಾಗವಹಿಸಿದರು.
ಈ ಕಾರ್ಯಕ್ರಮಕ್ಕೆ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್ ಅಶೋಕ್, ವಿಧಾನ ಪರಿಷತ್ ಸದಸ್ಯ ಶರವಣ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಹಾಯಾಗಕ್ಕೆ ಸಾಕ್ಷಿಯಾದರು.

ಮನೆ ನಿರ್ಮಾಣಕ್ಕೆ ದೈವಿಕ ಆಶೀರ್ವಾದಕ್ಕಾಗಿ ವಿಶೇಷ ಯಾಗ
ನೂತನ ಮನೆ ನಿರ್ಮಿಸುತ್ತಿರುವವರು, ನಿರ್ಮಾಣ ಯೋಜನೆ ಹೊಂದಿರುವವರು ಹಾಗೂ ಈಗಾಗಲೇ ಮನೆ ಕಟ್ಟಿರುವವರು ದೈವಿಕ ಆಶೀರ್ವಾದ ಪಡೆಯುವ ಉದ್ದೇಶದಿಂದ ಈ ಮಹಾಯಾಗವನ್ನು ಆಯೋಜಿಸಲಾಗಿತ್ತು. ಮನೆ ನಿರ್ಮಾಣದ ಪ್ರಕ್ರಿಯೆಯಲ್ಲಿ ಭೂಮಿಗೆ ತಿಳಿದು-ತಿಳಿಯದೆ ಉಂಟಾದ ಹಾನಿಗೆ ಕ್ಷಮೆ ಕೋರಿ, ನಿರ್ಮಾಣ ಕಾರ್ಯ ಸುಗಮವಾಗಿ ಹಾಗೂ ಸುರಕ್ಷಿತವಾಗಿ ನಡೆಯಲಿ ಎಂಬ ಪ್ರಾರ್ಥನೆ ಸಲ್ಲಿಸಲಾಯಿತು.

ವಿವಿಧ ಕ್ಷೇತ್ರದ ಜನರ ಭಾಗಿ
ರಾಜ್ಯದ ವಿವಿಧ ಭಾಗಗಳಿಂದ ಇಂಜಿನಿಯರ್‌ಗಳು, ಕಟ್ಟಡ ನಿರ್ಮಾಣಕಾರರು, ಗೃಹ ಮಾಲೀಕರು ಹಾಗೂ ಕುಟುಂಬ ಸಮೇತರಾಗಿ ಬಂದ ಭಕ್ತರು ಈ ಮಹಾಯಾಗದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪೂಜೆ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಒಟ್ಟಾರೆ, ಆಧ್ಯಾತ್ಮಿಕತೆ ಮತ್ತು ಸಮಾಜದ ಒಳಿತನ್ನು ಒಟ್ಟುಗೂಡಿಸಿದ ಈ ಮಹಾಯಾಗ ಭಕ್ತರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ.
ಆಫರ್
ಹೆಚ್ಚಿನ ಮಾಹಿತಿಗಾಗಿ ಹಾಗೂ ಆಫರ್ ಗಾಗಿ ಕೆಳಗಿನ ಕೆಳಗಿನ್ ಲಿಂಕ್ ಕ್ಲಿಕ್ ಮಾಡಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
Sri Lakshmi Bhoo Varaha Swamy Maha Yaga





