ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ.
ಬಜೆಟ್ ಅಧಿವೇಶನ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗ್ತಿದೆ.
ನಾನು, ಆರ್ ಅಶೋಕ್ ಅವರು ಸದನ ಹೇಗೆ ಮುನ್ನಡೆಸಬೇಕು ಅಂತ ಚರ್ಚೆ ಮಾಡ್ತೇವೆ.
ಎಲ್ಲಾ ವಿಚಾರ ಪ್ರಮುಖರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ….
ವಿಜಯೇಂದ್ರ..
ಶಾಸಕ ಚಂದ್ರು ಲಮಾಣಿ ಬಂಧನ ವಿಚಾರ..
ನಾನೂ ಕೂಡ ದೃಷ್ಯ ಮಾಧ್ಯಮದಲ್ಲಿ ನೋಡಿದ್ದೇನೆ..
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಂಜಾರ ಸಮಾಜ ಟಾರ್ಗೆಟ್ ಮಾಡಿರೋದು ಜಗಜ್ಜಾಹಿರಾಗಿದೆ..
ಬಂಜಾರ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದೆ..
ಶೇ.100ಕ್ಕೆ ನೂರರಷ್ಟು ಬೆಂಬಲಿಸಿ ನಿಂತಿದೆ..
ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಬಂಜಾರ ಸಮಾಜಕ್ಕೆ ಅನ್ಯಾಯವೂ ಆಗಿದೆ, ನಿರ್ಲಕ್ಷ್ಯ ಮಾಡಿದ್ದಾರೆ..
ಡಿಸಿಎಂ ಅವರು ಬಂಜಾರ ಕಾರ್ಯಕ್ರಮಕ್ಕೆ ಹೋಗಿದ್ರು..
ಸಹಜವಾಗಿ ಡಿಸಿಎಂಗೆ ಗೇರಾವ್ ಹಾಕಿ ಪ್ರತಿಭಟನೆ ಮಾಡಿದ್ರು..
ಡಿಸಿಎಂ ಓಡಿ ಹೋಗೋದ್ರ ಜೊತೆಗೆ, ಯುವಕರ ಮೇಲೆ FIR ಹಾಕಿದ್ದಾರೆ..
ಚಂದ್ರು ಲಮಾಣಿ ಶಾಸಕರಿದ್ದಾರೆ, ಅವರು ಕೋರ್ಟಲ್ಲಿ ಎದುರಿಸ್ತಾರೆ..
ಈಗಾಗಲೇ ಅನೇಕ ಆಡಿಯೋ ಲೀಕ್ ಆಗಿದೆ..
ಆದ್ರೆ ಬಂಜಾರ ಸಮಾಜದ ಮೇಲೆ ಅನ್ಯಾಯ ಮಾಡ್ತಿದ್ದಾರೆ..
ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ, ಡಿಸಿಎಂ ಭ್ರಷ್ಟಾಚಾರ ಬಗ್ಗೆ ಮಾತಾಡೋ ಯೋಗ್ಯತೆ ಇದೆಯಾ..?
ಸರ್ಕಾರ ಬಂದ ಕೂಡಲೇ ವಾಲ್ಮೀಕಿ ಹಗರಣ, ಮೂಡಾ ಹಗರಣ ನಡೆದಿದೆ..
ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಸಿಕೊಂಡಿಲ್ಲವಾ..?
ಪ್ರಿಯಾಂಕ್ ಖರ್ಗೆ ನಮಗೆ ಭ್ರಷ್ಟಾಚಾರದ ಬಗ್ಗೆ ಹೇಳ್ತಾರೆ..
ಇದು ಭೂತದ ಬಾಯಲ್ಲಿ ಭಗವತ್ಗೀತೆ ತರ ಆಗಿದೆ..
ಬಂಜಾರ ಸಮಾಜದ ಬಗ್ಗೆ ತಾತ್ಸಾರ ಆಗಿದೆ..
ಭ್ರಷ್ಟಾಚಾರಕ್ಕೆ ಜಾತಿ ಲೇಪನ ಹಾಕಲ್ಲ..
ಸತ್ಯಾಸತ್ಯತೆ ಹೊರಗೆ ಬರಲಿ, ತನಿಖೆ ಆಗಲಿ..
ಈ ಸಮಾಜ ಹೇಗೆ ಟಾರ್ಗೆಟ್ ಆಗಿದೆ ಅಂತ ಹೇಳಿದ್ದಾರೆ..
ವಿಜಯೇಂದ್ರ..
ಸಿಎಂ ಜಾತಿ ಕಾರ್ಡ್ ಪ್ಲೇ ವಿಚಾರ..
ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮೇಲೆ ಸಿಟ್ಟು ಇಲ್ಲ..
ಆದ್ರೆ ಅವರ ಆಂತರಿಕ ಪಕ್ಷದಲ್ಲಿರೋರ ಮೇಲೆ ಕೋಪ..
ಕುರಿ ಕಾಯೋರು ಸಿಎಂ ಆಗಿದ್ದಾರೆ ಸಂತೋಷ..
ಆದ್ರೆ ಈ ಬಜೆಟ್‌ನಲ್ಲಾದ್ರೂ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ..
ನಾವು ಹಕ್ಕೊತ್ತಾಯ ಮಾಡ್ತಿದ್ದೇವೆ..
ಸಮುದಾಯಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ ವಿಜಯೇಂದ್ರ..




